ಬಂಟ್ವಾಳ : ತಾಲೂಕು ಪಿಂಚಣಿದಾರರ ವಾರ್ಷಿಕ ಮಹಾಸಭೆಯು ದಿ.19-04-2016ರಂದು ಬೆಳಿಗ್ಗೆ 10ಗಂಟೆಗೆ ತು ಳು ಶಿವಳ್ಳಿ ಬ್ರಾಹ್ಮಣ ರ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ತಮ್ಮಯ್ಯನವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಮುಖ್ಯ ಅತಿಥಿಗಳಾಗಿ ಡಾ.ಸೀತಾರಾಮ ಮಯ್ಯ ನಿವೃತ್ತ ಪ್ರಾಂಶುಪಾಲರು ಎಸ್.ವಿ.ಎಸ್.ಕಾಲೇಜು ಮತ್ತು ಕೆ.ಮೋಹನ್ ರಾವ್ ನಿವೃತ್ತ ತಹಶೀಲ್ದಾರರು ಹಾಗೂ ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಭಾಗವಹಿಸುವರು. 75 ವರ್ಷ ತುಂಬಿದ ಇಸಾಕ್ ಡಿಸೋಜ, ಏಕನಾಥ ಭಟ್, ಲಕ್ಷ್ಮಿ ನಾರಾಯಣ ಆಚಾರ್ಯ, ಉಮೇಶ್ ಕುಲಾಲ್, ಬಿ.ಅಚ್ಯುತ, ಪದ್ಮನಾಭ ಬಳ್ಳಾಲ್, ರಾಮಚಂದ್ರ ರಾವ್, ಬಾಲಕೃಷ್ಣ ರಾವ್, ಬಿ.ಜಗನ್ನಾಥ ಶೆಟ್ಟಿ, ಪುಂಡರಿಕಾಕ್ಷ ಕಲ್ಲುರಾಯ , ಚಂದ್ರಹಾಸ ಅಡಪ, ಕೂಸಪ್ಪ ಶೆಟ್ಟಿಗಾರ್, ಪುರುಷೋತ್ತಮ ಪೂಜಾರಿ , ಭಾನುಮತಿ, ತಿಮ್ಮಪ್ಪಯ್ಯ, ನಂದವರ್ಮರನ್ನು ಸನ್ಮಾನಿಸುವರು. ಕಾರ್ಯದರ್ಶಿ ನೀಲೋಜಿರಾವ್ ವರದಿ ಮಂಡಿಸುವರು. ಕೋಶಾಧಿಕಾರಿ ಕೆ.ಆರ್.ಪುತ್ತೂರಾಯ ಲೆಕ್ಕಪತ್ರ ಮಂಡಿಸುವರು. ಮುಂದಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ ಜರಗಲಿದೆ . ನಿವೃತ್ತ ಸರಕಾರಿ ನೌಕರರು , ನಿವೃತ್ತ ಸರಕಾರಿ ಅನುದಾನಿತ ಶಾಲಾ ಶಿಕ್ಷಕರು ಸಂಘದ ಸದಸ್ಯರಾಗಬಹುದೆಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

By suddi9

Leave a Reply

Your email address will not be published. Required fields are marked *