ಬಂಟ್ವಾಳ : ಪುರಸಭೆಯ ಆವರಣದಲ್ಲಿ 2015-16ನೇ ಸಾಲಿನ ಶೇ.3ರ ಯೋಜನೆಯಡಿ ಶೇಕಡಾ.75ಕ್ಕಿಂತ ಅಧಿಕ ವಿಕಲತೆ ಇರುವ ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮ ಜರಗಿತು. ಫ ಲಾನುಭವಿಗಳಾದ ಮುಸ್ತಾಫಾ ತಾಳಿಪಡ್ಪು, ಯೂಸುಫ್ ಗುಡ್ಡೆಯಂಗಡಿ, ಖತಿಜಮ್ಮ ಗೂಡಿನಬಳಿ, ಪೂಂಜೆರೆಕೋಡಿ ಶಿವಪ್ರಸಾದ ರವರಿಗೆ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ವಾಹನದ ಕೀಲಿಕೈ ಹಸ್ತಾಂತರಿಸಿದರು.


ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು , ಪುರಸಭಾಧಿಕಾರಿ ಸುಧಾಕರ ಭಟ್, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಗಂಗಾಧರ ಮಂಡಾಡಿ, ಜಗದೀಶ್ ಕುಂದರ್, ಯಾಸ್ಮಿನ್ ಅಹ್ಮದ್, ಪ್ರಭಾ ಆರ್ ಸಾಲ್ಯಾನ್ , ಚಂಚಲಾಕ್ಷಿ , ಜೆಸಿಂತಾ, ಸಂಜೀವಿನಿ , ಭಾಸ್ಕರ ಟೈಲರ್, ಪ್ರವೀಣ್ ಕಿಣಿ, ನೊಬರ್ಟ್ ರೋಡ್ರಿಗಸ್, ಆಶ್ರಯ ಸಮಿತಿ ಸದಸ್ಯರಾದ ಸಂಜೀವ ಕುಲಾಲ್, ಖಾಸಿಂ ಪುರ ಸಭಾ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
