ಮೂಡುಬಿದರೆ: ಪುತ್ತಿಗೆ ಶಕ್ತಿ ಕೇಂದ್ರದ ವತಿಯಿಂದ ಇಲ್ಲಿನ ಸಮಾಜ ಮಂದಿರದಲ್ಲಿ ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನಾಚರಣೆ ನಡೆಯಿತು. ಬಿಜೆಪಿ ಜಿಲ್ಲಾ ಮುಖಂಡರಾದ ಸುದರ್ಶನ ಎಂ. ಮಾತನಾಡಿ, ರಾಷ್ಟ್ರದ ಪುನರ್ ನಿರ್ಮಾಣದ ಉದ್ದೇಶದಿಂದ ರಾಜಕೀಯ ಕ್ಷೇತ್ರದಲ್ಲಿ ಒಂದು ಸಂಘಟನೆಯಾಗಿ ಬಿಜೆಪಿ ಕೆಲಸ ಮಾಡುತ್ತಿದೆ.

mbd_april9_1ಅನೇಕರ ತ್ಯಾಗ, ಬಲಿದಾನದಿಂದ ಪಕ್ಷ ಅಸ್ಥಿತ್ವ ಪಡೆದುಕೊಂಡಿದೆ.  ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡುವ ಪಕ್ಷದ ಕಾರ್ಯಕರ್ತರೇ ಪಕ್ಷದ ನಿಜವಾದ ಆಧಾರ ಸ್ಥಂಭಗಳು.  ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ,  ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ,  ರಾಜ್ಯ ಪರಿಷತ್ ಸದಸ್ಯ ಕೆ. ಆರ್. ಪಂಡಿತ್, ಮಂಡಲ ಕಾರ್ಯದರ್ಶಿ  ನಾಗರಾಜ ಪೂಜಾರಿ,  ಶಕ್ತಿ ಕೇಂದ್ರದ ಪ್ರಮುಖ್ ಅಜಯ್ ರೈ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *