ಬೆಂಗಳೂರು: ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಬಳಿ ನಡೆದ ಎಎನ್ಎಫ್ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎನ್ಎಫ್ ಪೇದೆ ನವೀನ್ ನಾಯಕ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಏ.19ರಂದು ನಡೆದ ಎನ್ ಕೌಂಟರ್ ನಲ್ಲಿ ಸುರತ್ಕಲ್ ನಿವಾಸಿ ಕಬೀರ್ ಎಂಬ ಯುವಕ ಮೃತಪಟ್ಟಿದ್ದ. ಈ ಎನ್ ಕೌಂಟರ್ ಕುರಿತು ಸಿಐಡಿ ತನಿಖೆ ನಡೆಯುತ್ತಿದ್ದು, ಪೇದೆ ನವೀನ್ ನಾಯಕ್ ಅವರನ್ನು ಬಂಧಿಸಲಾಗಿತ್ತು.

