ಮೂಡುಬಿದರೆ: ತೆಂಕತಿಟ್ಟು ಯಕ್ಷಗಾನದ ಹಾಸ್ಯ ಚಕ್ರವರ್ತಿ  ಭಾನುವಾರ ರಾತ್ರಿ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರವು ಮಿಜಾರು ದಡ್ಡಿಯಲ್ಲಿರುವ ಮನೆಯ ಆವರಣದಲ್ಲಿ ಸೋಮವಾರ ಮಧ್ಯಾಹ್ನದ ವೇಳೆ ನಡೆಯಿತು.

mbd_april4_1 (2) (1)

mbd_april4_1 (1) (1)

mbd_april4_1 (4)

mbd_april4_1 (3)
ಮಿಜಾರು ಅಣ್ಣಪ್ಪ ಸೋಮವಾರ ರಾತ್ರಿ ಮನೆಯಲ್ಲಿ ಊಟ ಮುಗಿಸಿದ ಬಳಿಕ ಕುಸಿದು ಬಿದ್ದು ಮೃತಪಟ್ಟಿದ್ದರು. ಮಿಜಾರು ಅಣ್ಣಪ್ಪ ಅವರ ನಿಧನದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ನಡೆದ ಎಲ್ಲಾ ಯಕ್ಷಗಾನ ಮೇಳಗಳ ರಂಗಸ್ಥಳದಲ್ಲಿ ಸಂತಾಪ ವ್ಯಕ್ತಪಡಿಸಲಾಗಿತ್ತು. ಸೋಮವಾರ ಯುವಜನಸೇವೆ ಮತ್ತು ಮೀನುಗಾರಿಕ ಸಚಿವ ಕೆ. ಅಭಯಚಂದ್ರ ಜೈನ್, ಶಾಸಕ ಮೊದಿನ್ ಬಾವಾ, ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ, ಕೃಷ್ಣ ಪಾಲೆಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ,ಯಕ್ಷಗಾನ ಕಲಾವಿದರಾದ ಸರಪಾಡಿ ಅಶೊಕ್ ಶೆಟ್ಟಿ, ಡಿ. ಮನೋಹರ್ ಕುಮಾರ್, ದಾಸಪ್ಪ ರೈ, ಸಂಜಯ ಕುಮಾರ್ ಗೋಣಿಬೀಡು, ಶಿಷ್ಯ ತಿಮ್ಮಪ್ಪ ಮಿಜಾರು, ಉದ್ಯಮಿ ರಾಜೇಶ್ ನಾಯಕ್ ಉಳಿಪಾಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಉಮಾನಾಥ ಕೋಟ್ಯಾನ್, ಜಗದೀಶ್ ಅಧಿಕಾರಿ, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎರಿಕ್ ಒಝಾರಿಯೋ, ಜಿ. ಪಂ ಸದಸ್ಯ ಜನಾರ್ಧನ ಗೌಡ, ತಾ. ಪಂ ಸದಸ್ಯೆ ಜಯಂತಿ, ಬಡಗೆಡಪದವು ಪಂ ಅಧ್ಯಕ್ಷೆ ಲಲಿತಾ ಶೆಟ್ಟಿಗಾರ್, ತೆಂಕಮಿಜಾರು ಗ್ರಾ. ಪಂ ಪಿಡಿಒ ಸಾಯಿಶ್ ಚೌಟ ಮೂಡುಬಿದಿರೆ ಯಕ್ಷ ಸಂಗಮದ ಸಂಚಾಲಕ ಶಾಂತಾರಾಮ ಕುಡ್ವ, ಬೆಳುವಾಯಿ ಯಕ್ಷದೇವ ಮಿತ್ರ ಮಂಡಳಿಯ ಸಂಚಾಲಕ ದೇವಾನಂದ ಭಟ್, ಕಾಂತಾವರ ಯಕ್ಷದೇಗುಲದ ಸಂಚಾಲಕ ಮಹಾವೀರ ಪಾಂಡಿ, ಕಿನ್ನಿಗೋಳಿ ಮೋಹಿನಿ ಕಲಾ ಸಂಪದದ ಸಂಚಾಲಕ ಗಂಗಾಧರ ಶೆಟ್ಟಿಗಾರ್ ಮಿಜಾರು ನಾಗರಿಕ ಹಿತರಕ್ಷಣಾ ವೆದಿಕೆಯ ಸಂಚಾಲಕ ಸುದಾಕರ ಪೂಂಜಾ ಮತ್ತಿತರು ಅಂತಿಮ ದರ್ಶನ ಪಡೆದರು.
ಧಾರ್ಮಿಕ ವಿಧಿ ವಿದನಗಳು ನಡೆದ ಬಳಿಕ ಪುತ್ರ ಸದಾಶಿವ ಮಿಜಾರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

By suddi9

Leave a Reply

Your email address will not be published. Required fields are marked *