ಮೂಡುಬಿದಿರೆ : ಇಲ್ಲಿನ ಹೌದಾಲ್ ಎಂಬಲ್ಲಿ ಮಧ್ಯಾಹ್ನ ಜೀಪೊಂದು ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯ ಜಯಪ್ರಕಾಶ್ (45) ಎಂಬವರೇ ಮೃತಪಟ್ಟವರಾಗಿದ್ದು, ಜೀಪು ಚಾಲಕ ಸಂದೀಪ್ ಹಾಗೂ ಸಹ ಪ್ರಯಾಣಿಕ ತಿಮ್ಮಯ್ಯ ಎಂಬವರು ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯಲ್ಲಿ ವರ್ಷಪ್ರಂತೀ ಗ್ರಾಮಸ್ಥರು ಸೇರಿ ಆಚರಿಸುವ ಪುರುಷ ಹಬ್ಬಕ್ಕೆ ಮಂಗಳೂರಿನ ಕದ್ರಿ ದೇವಸ್ಥಾನದಿಂದ ಪ್ರಸಾದ ತರುವುದರ ಮೂಲಕ ಚಾಲನೆ ನೀಡುವುದು ವಾಡಿಕೆಯಾಗಿತ್ತು. ಅದರಂತೆ ಗ್ರಾಮಸ್ಥರು ಪರವಾಗಿ ಈ ಮೂವರು ಕಮಾಂಡರ್ ಜೀಪೊಂದರಲ್ಲಿ ಮಂಗಳೂರಿಗೆ ತೆರಳಿ ಸುಲ್ಕೇರಿ ಕಡೆಗೆ ವಾಪಾಸಾಗುವ ಸಂದರ್ಭ ಮೂಡುಬಿದಿರೆ ಸಮೀಪದ ಹೌದಾಲ್ನಲ್ಲಿ ಈ ದುರಂತ ನಡೆದಿದೆ. ಅಪಘಾತಕ್ಕೆ ಜೀಪಿನ ಟಯರ್ ಒಡೆದದ್ದೇ ಕಾರಣ ಎಂದು ತಿಳಿದುಬಂದಿದೆ.

By suddi9

Leave a Reply

Your email address will not be published. Required fields are marked *