ಬಂಟ್ವಾಳ; ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾ ಷಚರಣಾ ಸಮಿತಿಯ ಆಶ್ರಯದಲ್ಲಿ ರಜತ ವರ್ಷಾಚರಣೆಯ ಅಂಗವಾಗಿ ಇತ್ತೀಚೆಗೆ ನಡೆದ ಮಾಧ್ಯಮ ಛಾಯಾಗ್ರಾಹಕ ಕಿಶೋರ್ ಪೆರಾಜೆಯವರ ವಿಶೇಷ ಛಾಯಾಚಿತ್ರಗಳ ಪ್ರದರ್ಶನ “ರಜತನಡೆಯಲ್ಲೊಂದು ಛಾಯಾಕಿರಣ” ಕಾರ್ಯಕ್ರಮದಲಿ ಛಾಯಾಗ್ರಾಹಕ ಕಿಶೋರ್ ಪೆರಾಜೆಯವರನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ರವಿ ಪೊಸವಣಿಕೆ ಸನ್ಮಾನಿಸಿದರು.
ನಗರ ಠಾಣಾಧಿಕಾರಿ ನಂದಕುಮಾರ್, ಕವಿ ಚಂದ್ರಶೇಖರ ಪಾತೂರು, ಬಂಟ್ವಾಳ ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ, ರಜತವರ್ಷಾಚರಣಾ ಸಮಿತಿ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್ ,ಸಂಚಾಲಕ ರಾದ ವೆಂಕಟೇಶ್ ಬಂಟ್ವಾಳ, ಹರೀಶ್ ಮಾಂಬಾಡಿ, ಪ್ರೆಸ್ಕ್ಲಬ್ ಉಪಾಧ್ಯಕ್ಷ ರತ್ನದೇವ್ ಪೂಂಜಾಲಕಟ್ಟೆ, ವಾಮನ ಪೂಜಾರಿ ಪೊಳಲಿ, ಸುಕುಮಾರ ಬಂಟ್ವಾಳ, ಚಂದ್ರಶೇಖರ ಕಲ್ಮಲೆ, ಯಾದವ ಅಗ್ರಬೈಲು, ಉದಯಶಂಕರ ನೀರ್ಪಾಜೆ ಮೊದಲಾದವರು ಉಪಸ್ಥಿತರಿದ್ದರು.

