ಪೊಳಲಿ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೆಳಗಿನ ಮಠ ರಘುರಾಮ ಶೆಟ್ಟಿಯವರ ದ್ವಿತೀಯ ಪುತ್ರಿ ಅಕ್ಷತಾ ಶೆಟ್ಟಿ (22 ವ) ಫೆ.27 ರಂದು ಶನಿವಾರ ನಿಧನರಾದರು.

ಅಕ್ಷತಾ ಶೆಟ್ಟಿ ಇಂಜಿನೀಯರ್ ಪದವಿಧರೆಯಗಿ ಇನ್ಪೋಸಿಸ್ನಲ್ಲಿ ಮೈಸೂರಿನಲ್ಲಿ ಉದ್ಯೋಗದಲ್ಲಿದ್ದರು. ಇತ್ತಿಚೇಗೆ ಅಸೌಖ್ಯದಿಂದ ಮನೆಯಲ್ಲೆ ಇದ್ದರು. ಶನಿವಾರ ತೀವ್ರ ಅಸೌಖ್ಯದಿಂದ ಇದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯದಲ್ಲೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಅವರ ಅಂತ್ಯ ಸಂಸ್ಕಾರವನ್ನು ಭಾನುವಾರ ಕೆಳಗಿನಮಠದಲ್ಲಿ ನೆರವೇರಿಸಲಾಯಿತು. ಮೃತರು ತಾಯಿ, ಅಕ್ಕ ಮತ್ತು ಒರ್ವ ತಮ್ಮನನ್ನು ಅಗಲಿದ್ದಾರೆ ಮತ್ತು ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.
