ಕೈಕಂಬ : ಬಜ್ಪೆ ವ್ಯಾಪ್ತಿಯ ತಾ.ಪಂ. ಚುನಾವಣೆಯಲ್ಲಿ ಕೆಲವು ಕಡೆ ಬಿಜೆಪಿ ಪ್ರಾಬಲ್ಯ ಮೆರೆದರೆ ಇನ್ನು ಕೆಲವು ಕಡೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರದಿದೆ. ಎಕ್ಕಾರಿನಲ್ಲಿ ಕಾಂಗ್ರೆಸ್‍ನ ಪ್ರತಿಭಾ ಶೆಟ್ಟಿಯವರು 2975 ಮತ ಪಡೆದರೆ, ಬಿಜೆಪಿಯ ಲೀಲಾವತಿ ರಾವ್ ಅವರು 2892 ಮತ ಪಡೆದು ಪರಾಭವಗೊಂಡಿದ್ದಾರೆ. ಅದೇ ರೀತಿ ಗುರುಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಕುಮಾರ್ ಅವರು 4123 ಮತಗಳ ಭರ್ಜರಿ ಮತ ಪಡೆದು ಗೆದ್ದಿದ್ದು, ಬಿಜೆಪಿಯ 1941 ಮತಗಳನ್ನಷ್ಟೇ ಪಡೆದು ಸೋಲನ್ನನುಭವಿಸಿದ್ದಾರೆ.
ಇನ್ನು ಮೂಡುಪೆರಾರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಪೂರ್ಣಿಮಾ ಗಣೇಶ್ ಪೂಜಾರಿ 2470 ಮತ ಪಡೆದು ಗೆದ್ದು ಬಿಜೆಪಿ ಸುನೀತಾ ಅವರನ್ನು ಸೋಲಿಸಿದ್ದಾರೆ.
ಇನ್ನುಳಿದ ಕ್ಷೇತ್ರಗಳಾದ ಬಡಗ ಎಡಪದವುವಿನಲ್ಲಿ ಬಿಜೆಪಿಯ ಜಯಲಕ್ಷ್ಮೀ ಪ್ರಕಾಶ್ 2886 ಮತ ಪಡೆದು ಗೆಲವಿನ ನಗೆ ಬೀರಿದ್ದು, ಕಾಂಗ್ರೆಸ್‍ನ ಪುಷ್ಪ ಅವರು 1901 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಇನ್ನು ಬಜ್ಪೆ ಕ್ಷೇತ್ರದಲ್ಲಿ ಬಿಜೆಪಿಯ ಉಷಾ ಸುವರ್ಣ, 1777 ಮತ ಪಡೆದು ಗೆದ್ದರೆ, ಕಾಂಗ್ರೆಸ್‍ನ ರೇಷ್ಮಾ ಅವರು 1117 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಭಾಗದಲ್ಲಿ ಎಸ್‍ಡಿಪಿಐ ಸ್ಪರ್ಧಿಸಿದ್ದು ಇದರ ಶಹನಾಝ್ ಮನ್ಸೂರು ಅವರು 1497 ಮತಪಡೆದಿದ್ದಾರೆ. ಎಸ್‍ಡಿಪಿಐ ಸ್ಪರ್ಧಿಸಿರುವುದು ಕಾಂಗ್ರೆಸ್ ಹೀನಾಯವಾಗಿ ಸೋಲಲು ಕಾರಣವಾಗಿದೆ ಎನ್ನಲಾಗಿದೆ.
ಇನ್ನು ಮಳವೂರು ಕ್ಷೇತ್ರದಲ್ಲಿ ಬಿಜೆಪಿಯ ಸುಪ್ರಿತಾ ಶೆಟ್ಟಿ 2314 ಮತ ಪಡೆದು ಗೆದ್ದಿದ್ದಾರೆ. ಎರಡನೇ ಸ್ಥಾನಿಯಾದ ಪ್ರೆಸಿಲ್ಲಾ ಡೆಲ್ಫಿನ್ 1797 ಮತ ಪಡೆದಿದ್ದರು. ಈ ಭಾಗದಲ್ಲಿ ಬಿಎಸ್‍ಪಿ ಸ್ಪರ್ಧಿಸಿತ್ತು.
ಕುಪ್ಪೆಪದವು ಬಿಜೆಪಿ ಸ್ಥಾನಗಳಿಸಿದ್ದು ನಾಗೇಶ್ ಶೆಟ್ಟಿ 3479 ಮತ ಪಡೆದು ಗೆದ್ದಿದ್ದಾರೆ. ಇನ್ನು ಕಾಂಗ್ರೆಸ್‍ನ ನೋಬರ್ಟ್ ಮಥಾಯಸ್ 3008 ಮತ ಪಡೆದು ಪರಾಭವಗೊಂಡರು.
ಇನ್ನು ಗಂಜಿಮಠ ಕ್ಷೆತ್ರದಲ್ಲಿ ಕಾಂಗ್ರೆಸ್‍ನ ಜಿ. ಸುನಿಲ್ ಕುಮಾರ್ ಅವರು 3334 ಮತ ಪಡೆದು ಬಿಜೆಪಿ ಅಭ್ಯರ್ಥಿ ದೋಗುಪೂಜಾರಿ ಅವರನ್ನು ಸೋಲಿಸಿದ್ದಾರೆ.
ಕೊಳಂಬೆ ಕೇತ್ರದಲ್ಲಿ ಬಿಜೆಪಿಯ ವಿಶ್ವನಾಥ್ ಶೆಟ್ಟಿ(ಬೊಗ್ಗಣ್ಣ) 3040 ಮತ ಪಡೆದು ಕಾಂಗ್ರೆಸ್‍ನ ಹೆರಾಲ್ಡ್ ಎ.ಜೆ. ಲೋಬೋ ಅವರನ್ನು ಸೋಲಸಿದ್ದಾರೆ.
ಕೆಲವು ಭಾಗದಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿದಿದ್ದರೆ, ಇನ್ನು ಕೆಲವು ಕಡೆ ಸಿಪಿಐಎಂ ಪಕ್ಷದ ಅಭ್ಯರ್ಥಿಗಳೂ ಸ್ಪರ್ಧಿಸಿದ್ದರು.
ನೋಟಾದತ್ತ ನೋಟ: ಕ್ಷೇತ್ರದಲ್ಲಿ ಮತದಾರರು ನೋಟಾ ದತ್ತ ನೋಟ ಹರಿಸಿರುವುದು ಕಂಡುಬಂದಿದೆ. ಎತ್ತಿನಹೊಳೆ ಯೋಜನೆಯ ವಿರುದ್ಧ ಹೋರಾಟಗಾರರು ನೋಟಾದತ್ತ ಮತ ಚಲಾಯಿಸಿ ಎಂದು ಕರೆ ನೀಡಿದ ಕಾರಣ ಮತದಾರರು ಈ ರೀತಿ ಮಾಡಿದ್ದಾರೆನ್ನಲಾಗಿದೆ.
