ಮಂಗಳೂರು: ದ.ಕನ್ನಡ ಕ್ಷೇತ್ರದಲ್ಲಿ ಗೆಲ್ಲುವುದಕ್ಕೆ ನನಗೆ ಯಾವ ತೊಂದರೆಯೂ ಇರಲಿಲ್ಲ. ಮತದಾರರೂ ಕೂಡಾ ಯಾವುದೇ ಸಂಕಷ್ಟ ಎದುರಿಸಿರಲಿಲ್ಲ. ಸಮೀಕ್ಷೆಗಳು ಉಲ್ಟಾ ಹೊಡೆದಿದೆ. ಆದರೆ ನಾನು ಗೆಲ್ಲುವುದಕ್ಕೆ ತೊಂದರೆಯಿದ್ದಿದ್ದು ಮಾಧ್ಯಮಗಳಿಗೆ ಮಾತ್ರ ಎಂದು ಹೇಳಿದ್ದಾರೆ.

ದೆಹಲಿಗೆ ತೆರಳಿದ್ದ ಸಂದರ್ಭ ಪತ್ರಕರ್ತನ ಪ್ರಶ್ನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಈ ರೀತಿ ಉತ್ತರಿಸಿದ್ದಾರೆ.
ಅದೇ ರೀತಿ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಕೂಡಾ ಮಾಧ್ಯಮದೊಂದಿಗೆ ಉತ್ತರಿಸುತ್ತಾ ಕೆಲವು ಮಾಧ್ಯಮಗಳು ಮೋದಿಯ ಬಗ್ಗೆ ನಕಾರಾತ್ಮಕವಾಗಿ ಬಿಂಬಿಸಲು ಸುಪಾರಿ ಪಡೆದುಕೊಂಡಂತೆ ವರ್ತಿಸಿದೆ ಎಂದು ಹೇಳಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳು ನಳಿನ್ ಕುಮಾರ್ ಕಟೀಲ್ ಹೀನಾಯವಾಗಿ ಸೋಲುತ್ತಾರೆ ಎಂದು ಭವಿಷ್ಯ ನುಡಿದ್ದಿದ್ದವು. ಆದರೆ ಇದು ಕೆಲವೇ ಸಮಯಗಳಲ್ಲಿ ಬೆಟ್ಟಿಂಗ್ ದಂಧೆಕೋರರು ಹಬ್ಬಿಸಿದ್ದ ವದಂತಿ ಎಂಬುದು ಬಯಲಾಗಿತ್ತು. ನಳಿನ್ಈಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ವಿರುದ್ಧ 1 ಲಕ್ಷದ 43 ಸಾವಿರ ಮತಗಳ ಅಂತರದಲ್ಲಿ ಗೆದ್ದಿರುವುದು ಇತಿಹಾಸ.
