ಪೊಳಲಿ: ಸಜಿಪ ಮುನ್ನೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಗೆ ಸ್ಫರ್ಧಿಸುವ ಕೆ.ಪದ್ಮನಾಭ ಕೊಟ್ಟಾರಿ ಅವರು ಕರಿಯಂಗಳ ಬಡಗಬೆಳ್ಳೂರು ತೆಂಕಬೆಳ್ಳೂರು ಗ್ರಾಮಗಳಲ್ಲಿ ಕಾರ್ಯಕರ್ತರೊಂದಿಗೆ ಬಿರುಸಿನ ಮನೆಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು. ಕರಿಯಂಗಳ ತಾಲೂಕು ಪಂಚಾಯತ್ ಕ್ಷೇತ್ರದ ಅಭ್ಯರ್ಥಿ ಯಶವಂತ ಪೂಜಾರಿಯವರು ಕೊಟ್ಟಾರಿಯವರೊಂದಿಗೆ ಸಾಥ್ ನೀಡಿದರು.
ಗ್ರಾ.ಪಂ.ಸದಸ್ಯೆ ರೂಪ ನಾರಾಯಣ್, ಬಡಗಬೆಳ್ಳೂರು ಗ್ರಾ.ಪಂ.ಸದಸ್ಯ ಅನುಪ್ ಸುಮಿತ್ ಫೆರ್ನಾಂಡೀಸ್, ವೆಂಕಟೇಶ್ ನಾವಡ, ತಿರುಮಲೇಶ್, ಪ್ರಕಾಶ್ ಅವರುಗಳು ಹಲಾವಾರು ಬಿಜೆಪಿ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮೋದಿ ಸರ್ಕಾರದ ಸಾಧನೆಯನ್ನು ವಿವರಿಸುತ್ತ ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಬಗ್ಗೆ, ಬಿಜೆಪಿ ಆಡಳಿತದ ಅವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳ ಕುರಿತು ತಿಳಿಸಿ ಮತದಾರರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು.




