ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಹರಕೆಯ ಲಕ್ಷ ಕುಂಕುಮಾರ್ಚನೆ ಜ.29ರಂದು ದೇವಿ ಸನ್ನಿಧಿಯಲ್ಲಿ ನಡೆಯಿತು. ಪೊಳಲಿ ಶ್ರೀಮತಿ ಲಲಿತಾ ಗೋಪಾಲಕೃಷ್ಣರಾವ್ ಅತ್ತಾವರ ಅವರು ಸೇವೆಯ ರೂಪದಲ್ಲಿ ಶ್ರೀ ದೇವಿಗೆ ಲಕ್ಷ ಕುಂಕುಮಾರ್ಚನೆಯನ್ನು ಮಾಡಿಸಿದರು. ದೇವಳದ ಪವಿತ್ರಪಾಣಿ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ರಾಮ್ ಭಟ್ ಅವರುಗಳು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು . ಹಾಗೂ ದೇವಳದ ಅರ್ಚಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು.



