ಮೂಡುಬಿದಿರೆ:ಸಿವಿಲ್ ಇಂಜಿನೀಯರಿಂಗ್ ಕ್ಷೇತ್ರವು ಬಹಳ ವಿಶಾಲವಾಗಿದ್ದು ಉದ್ಯೋಗಿಗಳಿಗೆ ವಿಫುಲ ಅವಕಾಶಗಳಿವೆ.ವಿದ್ಯಾರ್ಥಿಗಳಿಗೆ ನಿರ್ಮಾಣ ಕ್ಷೇತ್ರದಲ್ಲಿ ಸಂಶೋದನೆ ಅವಕಾಶಗಳಿದ್ದು ಅದನ್ನು ಉಪಯೋಗಿಸಬೇಕು. ಚೀನಾ, ಜಪಾನ್ ಸೇರಿದಂತೆ ಮುಂದುವರೆದ ದೇಶಗಳು ಈಗಾಗಲೆ ಉನ್ನತ ತಂತ್ರsಜ್ಞಾನವನ್ನು ಅಳವಡಿಸಿಕೊಂಡದ್ದು ನಮ್ಮ ದೇಶವು ಆ ತಂತ್ರsಜ್ಞಾನವನ್ನು ಹೊಂದಬೇಕೆಂದು ಫ್ರೊ. ಗಂಗಾಧರ ಮಹೇಶ ಹೇಳಿದರು.
ಆಳ್ವಾಸ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಮೂರು ದಿನಗಳು ನಡೆಯುವ `ಕೈಗಾರಿಕಾ ಕ್ಷೇತ್ರದಲ್ಲಿ ನಿರ್ಮಾಣ ನಿರ್ವಹಣೆ’ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಇಂಜಿನಿಯರ್ ಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಾಗಾರಗಳ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನವನ್ನು ವೃದ್ಧಿಸುವ ಪ್ರಯತ್ನವಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಕಾರ್ಯಾಗಾರ ಹಾಗೂ ಕೈಗಾರಿಕಾ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಚಿಂತನೆಯಲ್ಲಿದ್ದೇವೆ ಎಂದರು.
ಸಿವಿಲ್ ವಿಭಾಗದ ಮುಖ್ಯಸ್ಥರಾದ ಪ್ರೊ. ದುರ್ಗಾಪ್ರಸಾದ್ ಬಾಳಿಗ ಸ್ವಾಗತಿಸಿದರು. ಪ್ರೊ. ಸಂಜಯ್ ನಿರೂಪಿಸಿದರು. ಪ್ರೊ.ರವಿ ಪ್ರಸಾದ್ ವಂದಿಸಿದರು.
