ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಗ್ಗ ವಲಯ, ಕಕ್ಯಬೀಡು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಕಕ್ಯಬೀಡು ಶ್ರೀ ಪಂಚದುರ್ಗಪರಮೇಶ್ವರಿ ದೇವಿ ಕ್ಷೇತ್ರ ,ಉಳಿ ಎ ಮತ್ತು ಬಿ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಇದರ ಜಂಟಿ ಆಶ್ರಯದಲ್ಲಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಹಾಗೂ ಹೇಮಾವತಿ ವಿ.ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟ ಪದಗ್ರಹಣ ಕಾರ್ಯಕ್ರಮವು ಕಕ್ಯಬೀಡು ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಿ ಕ್ಷೇತ್ರದಲ್ಲಿ ಜರಗಿತು.
ಉಳಿ ಗ್ರಾ.ಪಂ.ಅಧ್ಯಕ್ಷೆ ದೀನಾಕ್ಷಿ ಮಲ್ಯೋಡಿ ಅವರು ಪದಗ್ರಹಣ ಮತ್ತು ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಎಸ್ವಿಎಸ್ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ| ರಾಜಮಣಿ ರಾಮಕುಂಜ ಅವರು ಧಾರ್ಮಿಕ ಉಪನ್ಯಾಸ ನೀಡಿದರು.ಶ್ರೀ.ಕ್ಷೇ.ಧ. ಗ್ರಾ.ಯೋಜನೆ ಸಿಬಂದಿ ನಿರ್ವಹಣೆ ವಿಭಾಗದ ನಿರ್ದೆಶಕ ಚಂದ್ರಶೇಖರ ಎನ್., ಉದ್ಯಮಿ ಸತೀಶ ಶೆಟ್ಟಿ ಬೋಳದಗುತ್ತು , ಕಕ್ಯಬೀಡು ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಕಕ್ಯಬೀಡು ಕ್ಷೇತ್ರದ ಅಧ್ಯಕ್ಷ ದಾಮೋದರ ನಾಯಕ್ ಉಳಿ, ಸಮಿತಿಯ ಅಧ್ಯಕ್ಷ ಚಿದಾನಂದ ರೈ ಕಕ್ಯ,ಒಕ್ಕೂಟ ನಿರ್ಗಮನ ಅಧ್ಯಕ್ಷರುಗಳಾದ ಶೇಖರ ಕಂಚಾಲಪಲ್ಕೆ, ಹರೀಶ್ ಪೂಜಾರಿ ಮುರಿಯೋಡಿ, ನೂತನ ಅಧ್ಯಕ್ಷರುಗಳಾದ ರಾಜಕುಮಾರ್ ಬಳ್ಳಿ, ನಾಗೇಶ್ ದಲ್ಯಂತಬೈಲು, ವಗ್ಗ ವಲಯ ಮೇಲ್ವಿಚಾರಕಿ ಭವಾನಿ, ಸೇವಾ ಪ್ರತಿನಿ ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.
