ಮಂಗಳೂರು: ಬಂಟರ ಸಂಘ ಜಪ್ಪಿನಮೊಗರು (ರಿ) ಇದರ ಬೆಳ್ಳಿಹಬ್ಬದ ಸ್ವಾಗತ ಸಮಿತಿ ರಚನೆಯ ಬಗ್ಗೆ ವಿಶೇಷ ಮಹಾಸಭೆ ಸಂಘದ ಸಭಾಂಗಣದಲ್ಲಿ ಅಧ್ಯಕ್ಷರಾದ ಶ್ರೀ ಜೆ. ಸೀತಾರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಪದ್ಮನಾಭ ಶೆಟ್ಟಿ ಪಂಜಿಮೊಗ್ರು ಗುತ್ತು, ಶ್ರೀ ಜೆ. ಶಶಿಧರ ಶೆಟ್ಟಿ, ಶ್ರೀ ಸದಾನಂದ ಆಳ್ವ ತಾರ್ದೊಲ್ಯ, ಉದ್ಯಮಿ ಶ್ರೀ ಅನಿಲ್ ಶೆಟ್ಟಿ ಮನ್ಕುತೋಟ ಗುತ್ತು, ಉಪಾಧ್ಯಕ್ಷರುಗಳಾದ ಶ್ರೀ ಜಗದೀಶ್ ಕಿಲ್ಲೆ ಗುಡ್ಡೆಗುತ್ತು, ಶ್ರೀಮತಿ ರಮಣಿ ಎಚ್. ಶೆಟ್ಟಿ, ಕೋಶಾಧಿಕಾರಿ ಶ್ರೀ ರಾಜೇಶ್ ಶೆಟ್ಟಿ (ಶಬರಿ), ಜತೆ ಕಾರ್ಯದರ್ಶಿಗಳಾದ ಶ್ರೀ ಜಯರಾಂ ಶೆಟ್ಟಿ, ಶ್ರೀ ರೀತೇಶ್ ಶೆಟ್ಟಿ ತೋಚಿಲ ಉಪಸ್ಥಿತರಿದ್ದರು.

IMG_6111 copy

 

ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಯಲದಿಂದ ಡಾಕ್ಟರೇಟ್ ಪದವಿಯನ್ನು ಪಡೆದ ಡಾ| ಸುಶಾಂತ್ ವಿ. ರೈ ಯನ್ನು ಅದೇ ರೀತಿ ಕರಾಟೆಯಲ್ಲಿ ರಾಜ್ಯಮಟ್ಟದ ಸಾಧನೆಗೈದು ಚಿನ್ನ, ಬೆಳ್ಳಿ, ಕಂಚು ಪಡೆದ ನಾಗೇಶ್ ಎಕ್ಕೂರು ಇವರಿಂದ ತರಬೇತಿ ಪಡೆಯುತ್ತಿರುವ ಶ್ರೀ ಕೃಷ್ಣ ಶೆಟ್ಟಿ ತಾರೆಮಾರ್, ಮನ್ವಿತ್ ಶೆಟ್ಟಿ, ಆತೀಶ ಶೆಟ್ಟಿ, ಅಭಿಷೇಕ್ ಎಂ., ಶ್ರೇಯಸ್ ರೈ ಮತ್ತು ಸ್ಪೂರ್ತಿ ಎಂ. ಹಾಗೂ ಕೇರಳ-ಕರ್ನಾಟಕ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದ ವೈಶಾಕ್ ಶೆಟ್ಟಿ, ರಾಜ್ಯ ಮಟ್ಟದ ಟೀಕ್‍ವಾಂಡೋ ಮತ್ತು ಬಾಸ್ಕೆಟ್‍ಬಾಲ್ ಪಂದ್ಯಾಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ದತ್ತ ಪ್ರಸಾದ್ ಎಚ್. ಶೆಟ್ಟಿಯವರನ್ನು ಅಭಿನಂದಿಸಲಾಯಿತು. ಪ್ರಕಾಶ್ ಮೇಲಾಂಟ ಕಾರ್ಯಕ್ರಮ ನಿರೂಪಿಸಿದರು, ಪ್ರದಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ತಾರ್ದೊಲ್ಯ ವಂದಿಸಿದರು.

By suddi9

Leave a Reply

Your email address will not be published. Required fields are marked *