ಬಂಟ್ವಾಳ ತಾಲ್ಲೂಕಿನ ಪ್ರಸಿದ್ಧ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀ ಭಜನಾ ಮಂದಿರದಲ್ಲಿ ಬುಧವಾರ ನಡೆದ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿ ಪಂಚಲೋಹ ವಿಗ್ರಹಕ್ಕೆ ಭಕ್ತರು ಸ್ವತಃ ಸೀಯಾಳ ಅಭಿಷೇಕ ನೆರವೇರಿಸಿದರು. ಟ್ರಸ್ಟಿನ ಅಧ್ಯಕ್ಷ ಬಿ.ಯೋಗೀಶ ಸಪಲ್ಯ, ಗೌರವಾಧ್ಯಕ್ಷ ಸದಾನಂದ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

