ಬಂಟ್ವಾಳ : ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್ ಇವರಿಂದ ಬಡ್ಡಕಟ್ಟೆ ಮೀನು ಮಾರುಕಟ್ಟೆ ಸಮೀಪ ನಿರ್ಮಾಣಗೊಂಡ ಸಾರ್ವಜನಿಕ ಶೌಚಾಲಯದ ಉದ್ಘಾಟನೆ ಹಾಗೂ ಬಂಟ್ವಾಳ ಪುರಸಭೆಗೆ ಹಸ್ತಾಂತರಿಸುವ ಕಾರ್ಯಕ್ರಮ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ರವರ ಅಧ್ಯಕ್ಷತೆಯಲ್ಲಿ ಜರಗಿತು. ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಬೂಡಾ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಪುರಸಭಾ ಸದಸ್ಯರಾದ ಪ್ರವೀಣ್ ಬಿ., ಪ್ರವೀಣ್ ಕಿಣಿ, ರಾಮಕೃಷ್ಣ ಆಳ್ವ, ಸದಾಶಿವ ಬಂಗೇರಾ, ವಾಸು ಪೂಜಾರಿ, ಗಂಗಾಧರ ಪೂಜಾರಿ, ನೋರ್ಬರ್ಟ್ ರೋಡ್ರಿಗಸ್, ಜಗ ದೀಶ ಕುಂದರ್, ಪ್ರಭಾ ಸಾಲ್ಯಾನ್, ಚಂಚಲಾಕ್ಷಿ, ಜೆಸಿಂತಾ, ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ಶರೀಫ್, ಮುಖ್ಯಾಧಿಕಾರಿ ಸುಧಾಕರ ಭಟ್, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ ಹಾಗೂ ಎಂ.ಸಿ.ಎಫ್ ನ ನಿರ್ದೇಶಕರಾದ ಪ್ರಭಾಕರ ರಾವ್ ಮತ್ತು ಪಿ.ಜೆ.ರೈ, ರಮೇಶ್ ಭಟ್, ನಾಗೇಶ್ ಎಂ., ಜಯರಾಮ್ ಕಾರಂದೂರು , ಸುರೇಶ್ ಉಪಸ್ಥಿತರಿದ್ದರು.



