ಮೂಡುಬಿದರೆ : ಅಸಾಧಾರಣ ಪ್ರತಿಭೆಗಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿರುವ ಮೂಡಬಿದಿರೆ ಜೈನ ಹೈಸ್ಕೂಲಿನ ವಿದ್ಯಾರ್ಥಿನಿ ಪಂಚಮಿ ಮಾರೂರು ಅವರಿಗೆ ಎಸ್‍ಕೆಎಫ್ ಸಮೂಹ ಸಂಸ್ಥೆಗಳ ವತಿಯಿಂದ ರೂ. 50,555 ನಗದು ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
mbd_dec31_4ನಿಶ್ಮಿತಾ ಸಮೂಹ ಸಂಸ್ಥೆಗಳ ಪ್ರವರ್ತಕ ನಾರಾಯಣ ಪಿ.ಎಂ. ಮುಖ್ಯ ಅತಿಥಿಯಾಗಿ ಮಾತನಾಡಿ, ಪುಟ್ಟ ಸ್ವರೂಪದಲ್ಲಿ ಮೂಡಬಿದಿರೆಯಲ್ಲಿ ಪ್ರಾರಂಭವಾದ ಎಸ್‍ಕೆಎಫ್ ಇಂದು ಆಹಾರ ಧಾನ್ಯ ಸಂಸ್ಕರಣ ಯಂತ್ರೋಪಕರಣ, ಬಾಯ್ಲರ್, ಶುದ್ಧ ನೀರಿನ ಘಟಕ ಮೊದಲಾದ ಆರೋಗ್ಯ ಕಾಳಜಿಯ ಯಂತ್ರೋಪಕರಣಗಳನ್ನು ರೂಪಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತರುವಷ್ಟರ ಮಟ್ಟಿಗೆ ಬೆಳೆದಿದೆ. ಜತೆಗೆ ಶಿಕ್ಷಣ, ಸಾಂಸ್ಕ್ರತಿಕ ಮೊದಲಾದ ರಂಗಗಳಲ್ಲೂ ತನ್ನ ಕಾಳಜಿಯನ್ನು ವ್ಯಕ್ತಪಡಿಸುತ್ತ ಬಂದಿರುವುದು ಶ್ಲಾಘನೀಯ ಎಂದರು.
ಮೂಡಬಿದರೆ ಪ್ರೆಸ್‍ಕ್ಲಬ್ ಅಧ್ಯಕ್ಷ , ಕೆನರಾ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಎಂ. ಗಣೇಶ್ ಕಾಮತ್ ಅವರು ಪಂಚಮಿ ಮಾರೂರು ಹಾಗೂ ಎಸ್‍ಕೆಎಫ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ಎಸ್‍ಕೆಎಫ್ ಸಂಸ್ಥೆಯ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಡಾ.ಜಯಪ್ರಕಾಶ ಮಾವಿನಕುಳಿ ಅಭಿನಂದನಾ ಭಾಷಣ ಮಾಡಿದರು. ಎಸ್‍ಕೆಎಫ್ ಐಟಿಐ ಜೆಟಿಓ ಶರತ್ ನಿರೂಪಿಸಿದರು. ಪ್ರಾಚಾರ್ಯ ಪ್ರದೀಪ್ ಕುಮಾರ್ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *