ಮೂಡಬಿದರೆ: ಸ್ವಚ್ಚ ಭಾರತ ಅಭಿಯಾನದಡಿ ಬಡಗಎಡಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡ ಪೈಪು ಕಾಂಪೋಸ್ಟೊನಿಂದ ಮೂರು ತಿಂಗಳಲ್ಲಿ ತಯಾರಾದ ಬಗ್ಗೆ ಮಾಹಿತಿ ಶಿಬಿರವು ಬಡಗಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಲಿತ ಶೆಟ್ಟಿಗಾರ್ ರವರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ, ಮೋಹಿದ್ದೀನ್ ಬಾವಾ, ಶಾರದ ಉಪದ್ಯಾಕ್ಷರಾದ ಹರೀಶ್ ರಜನಿ ಹಾಗೂ ಎಡಪದವು ಗ್ರಾಮ ಪಂಚಾಯತ್ ಉಪದ್ಯಾಕ್ಷರಾದ ಗಂಗಾಧರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ, ಹಾಗೂ ಸಿಬ್ಬಂದಿ ವರ್ಗ ಶ್ರೀ ಕ್ಷೆ.ಧ.ಗ್ರಾ.ಯೋಜನೆಯ ಶುಭಲಕ್ಷ್ಮೀ ಸ್ವ-ಸಹಾಯ ಸಂಘ ತೆಂಕಮಿಜಾರು ಇದರ ಸರ್ವಸದಸ್ಯರು ಉಪಸ್ಥಿತರಿದ್ದರು.
