ಬಂಟ್ವಾಳ: ಡಿ. 24ರಂದು ಗುರುವಾರ ಕೈಮಾರು ಮಾತೃಛಾಯ ಮನೆಯಲ್ಲಿ  ಸದಾಶಿವ ಶೆಟ್ಟಿ ಮತ್ತು ಲೀಲಾವತಿಯವರ ಪುತ್ರ   ಪುನೀತ್ ಶೆಟ್ಟಿ ಇವರ ಧರ್ಮಪತ್ನಿ   ಸೌಮ್ಯರವರ ಸೀಮಂತ ಕಾರ್ಯಕ್ರಮ ಪ್ರಯುಕ್ತ ಇಂಡಿಯನ್ರೆಡ್ಕ್ರಾಸ್ ಸೊಸೈಟಿ ಮಂಗಳೂರು ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಜರಗಿತು.

11070006

11060007

11070002

11070004

ಬಂಟ್ವಾಳದ ಅತ್ಯಂತ ಗ್ರಾಮೀಣ ಪ್ರದೇಶವಾದ ಪಾಂಗಲ್ಪಾಡಿಕೈಮಾರು ಮಾತೃಛಾಯದಲ್ಲಿ ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ವಿಶೇಷವಾಗಿ ಗರ್ಭಿಣಿ ಮಹಿಳೆಯರು ರಕ್ತದ ಅನಿವಾರ್ಯತೆ ಹೊಂದುವ ಸಂದರ್ಭದಲ್ಲಿ ರಕ್ತವನ್ನು ಪಡೆದು ತಾನೂ ಹಾಗೂ ತನ್ನ ಜೀವದ ಕುಡಿಯನ್ನು ಉಳಿಸಿಕೊಳ್ಳುವ ಬಗ್ಗೆ ಗ್ರಾಮೀಣ ಮಹಿಳೆಯರು ಪಡುತ್ತಿರುವ ತೊಂದರೆ ಹಾಗೂ ಇದನ್ನು ಪರಿಹರಿಸಿಕೊಳ್ಳಲು  ಸಾಧ್ಯ ಎಂಬುದನ್ನು ಮನದಟ್ಟು ಮಾಡಲು ಇಡೀ ಗ್ರಾಮಕ್ಕೆ ಮಾದರಿಯಾಗುವಂತೆ ರಕ್ತ ನೀಡಿ ಜೀವ ಉಳಿಸಿ ಎನ್ನುವ ಧ್ಯೇಯದೊಂದಿಗೆ ರಕ್ತದಾನ ಶಿಬಿರವನ್ನು ನಡೆಸಲಾಯಿತು.

ಸೀಮಂತ ಕಾರ್ಯಕ್ರಮದಲ್ಲಿ ಸುಮಾರು 550 ಜನರು ಸೇರಿದ ಸಾಂಪ್ರದಾಯಿಕಕಾರ್ಯಕ್ರಮದಲ್ಲಿ ರೆಡ್ಕ್ರಾಸ್ ಬ್ಲಡ್ ಬ್ಯಾಂಕ್ ವತಿಯಿಂದ ಅತ್ಯಂತ ಸ್ವಚ್ಛತಾ ವಾತಾವರಣದಲ್ಲಿ ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ರೆಡ್ಕ್ರಾಸ್ ಸಿಬ್ಬಂದಿಗಳು 48 ಯೂನಿಟ್ಗಿಂತಲೂ ಹೆಚ್ಚು ರಕ್ತವನ್ನು ಸಂಗ್ರಹಿಸಿದರು.

ಕಾರ್ಯಕ್ರಮದ ಸಂಘಟಕರಾದ  ಪುನೀತ್ ಶೆಟ್ಟಿ ಮಾತಾನಾಡಿ  ದೇಶದ್ಯಾಂತ ಆನೇಕ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿರುವುದನ್ನು ಮನಗಂಡು ರಕ್ತದಾನದ ಮೂಲಕ ಸ್ಪಂದಿಸ ಬೇಕೆನ್ನುವ ಕಾರಣದಿಂದ ನಮ್ಮ ಸೀಮಂತ ಕಾರ್ಯಕ್ರಮದಲ್ಲಿ ರಕ್ತದಾನದಂತಹ ಅತ್ಯವಶ್ಯಕ ಕಾರ್ಯಕ್ರಮದ ಮೂಲಕ ಮಾನವೀಯತೆಗೆ ಸ್ಪಂದಿಸುವ ಕಿಂಚಿತ್ ಸೇವೆ ಮಾಡಬೇಕೆಂಬ ಪ್ರೇರಣೆಯಾದುದರಿಂದ ರಕ್ತದಾನದ ಶಿಬಿರ ಆಯೋಜಿಸಲಾಯಿತೆಂದು ತಿಳಿಸಿದರು.

ಬೆಳಗ್ಗೆ 10.00 ಗಂಟೆಯಿಂದಅಪರಾಹ್ನ 1.00 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಿತು. ಸಮಾರೋಪ ಸಮಾರಂಭದಲ್ಲಿಅತಿಥಿಯಾಗಿ ಆಗಮಿಸಿದ ಖ್ಯಾತ ಲೆಕ್ಕ ಪರಿಶೋಧಕ ಹಾಗೂ ಇಂಡಿಯನ್ರೆಡ್ಕ್ರಾಸ್ ಸೊಸೈಟಿ ದಕ್ಶಿಣಕನ್ನಡ ಜಿಲ್ಲಾ ಚೇರ್ಮೆನ್ ಶ್ರೀ ಶಾಂತಾರಾಮ ಶೆಟ್ಟಿಯವರು ಮಾತನಾಡುತ್ತಾ ಮನುಷ್ಯ ಎಂತಹ ಉಪಕಾರ ಮಾಡಿದರೂ ಜೀವ ಉಳಿಸಲು ರಕ್ತವನ್ನು ತಯಾರಿಸಿ ನೀಡಲು ಸಾಧ್ಯವೇ ಇಲ್ಲ. ಅದಕ್ಕಿರುವ ಏಕೈಕ ಪರಿಹಾರ 18 ರಿಂದ 60ರ ವಯೋಮಾನದ ಆರೋಗ್ಯವಂತ ಜನರು ತಮ್ಮರಕ್ತವನ್ನು ದಾನ ಮಾಡಿಜೀವ ಉಳಿಸಬಹುದು. ಇದಕ್ಕಿಂತ ದೊಡ್ಡ ಉಪಕಾರ ಬೇರೊಂದಿಲ್ಲವೆಂದು ತಿಳಿಸಿದರು.

ಮುಖ್ಯ ಅತಿಥಿಯಾದ ಲೇಡಿಗೋಶನ್ಆಸ್ಪತ್ರ್ರ್ರೆ ಮಂಗಳೂರು ಇದರ ವೈದ್ಯಾಧಿಕಾರಿಯಾದ ಡಾ.ದುರ್ಗಾ  ಪ್ರಸಾದ್ ಎಂ. ಆರ್.ಮಾತನಾಡುತ್ತಾ ಸಮುದಾಯದ ಜನರ ಜೀವ ಉಳಿಸಲು ಸರಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆತಂದಿದ್ದರು.ರಕ್ತ ಸಂಗ್ರಹದಂತಹ ಕಾರ್ಯಕ್ರಮಗಳು ಜನರ ಪ್ರೇರಣೆಯಿಂದಲೇ  ಯಶಸ್ವಿಯಾಗುವುದು. ಆದ್ದರಿಂದ  ರಕ್ತದಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅಗತ್ಯವೆಂದು ತಿಳಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮನೆಯ ಯಜಮಾನ   ಸದಾಶಿವ ಶೆಟ್ಟಿ ವಹಿಸಿದರು.
ಸಭೆಯಲ್ಲಿ ಉದ್ಯಮಿ  ಆನಂದ ಶೆಟ್ಟಿ, ಮಂಗಳ ಜ್ಯೋತಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ   ಅಶೋಕ್ಕುಮಾರ್ ಶೆಟ್ಟಿಉಪಸ್ಥಿತರಿದ್ದರು,

ಕಾರ್ಯಕ್ರಮವನ್ನು ನಮ್ಮ ಬಂಟ್ವಾಳ ಪತ್ರಿಕೆಯ ಕಾರ್ಯನಿರ್ವಹಕ ಸಂಪಾದಕ ಶ್ರೀಯುತ ಗೋಪಾಲ್ಅಂಚನ್ ನಿರೂಪಿಸದರು.

By suddi9

Leave a Reply

Your email address will not be published. Required fields are marked *