ಬಂಟ್ವಾಳ: ಶಾರುಖ್ ಖಾನ್ ಅವರ ‘ದಿಲ್ ವಾಲೆ’ ಚಲನ ಚಿತ್ರ ಪ್ರದರ್ಶನಕ್ಕೆ ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಘಟಕದ ವತಿಯಿಂದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಡೆ ಒಡ್ಡಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಅಮೀರ್ ಖಾನ್ ನೀಡಿದ ಹೇಳಿಕೆಯನ್ನು ಶಾರುಖ್ ಖಾನ್ ಬೆಂಬಲಿಸಿದ ಕಾರಣ ಬಿ.ಸಿರೋಡಿನಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.IMG-20151221-WA0026

mbd_dec20_3 (2)

ಬಿಸಿರೋಡಿನ ಕೃಷ್ಣ ಪ್ರೈಮ್ ನಲ್ಲಿರುವ ನಕ್ಷತ್ರ ಸಿನಿಮಾ ಮಂದಿರದಲ್ಲಿ ಸಂಜೆ ಸಿನಿಮಾ ಪ್ರದರ್ಶನ ನಡೆಯುವ ವಿಷಯ ತಿಳಿದ ಕಾರ್ಯಕರ್ತರು ಸಿನಿಮಾ ಮಂದಿರಕ್ಕೆ ನುಗ್ಗಿ ಸಿನಿಮಾ ಪ್ರದರ್ಶನ ಮಾಡದಂತೆ ಎಚ್ಚರಿಕೆ ನೀಡಿದ ಬಳಿಕ ಇನ್ನು ಮುಂದೆ ಪ್ರದರ್ಶನ ಮಾಡುವುದಿಲ್ಲ ಎನ್ನುವ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು. ವಿಭಾಗ ಸಂಚಾಲಕ ರವಿರಾಜ್, ಬಂಟ್ವಾಳ ತಾಲೂಕು ಸಂಚಾಲಕ ಚಂದ್ರ ಕಲಾಯಿ, ಮಂಗಳೂರು ಸಹಸಂಚಾಲಕ ಪ್ರವೀಣ್ ಬೆಂಜನಪದವು ಮತ್ತು ಪ್ರಮುಖ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು

By suddi9

Leave a Reply

Your email address will not be published. Required fields are marked *