ಬೆಂಗಳೂರು: ರಾಜ್ಯ ಸರಕಾರವು ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆ ಇಲ್ಲವೇ ಪ್ರಾದೇಶಿಕ ಭಾಷೆಯನ್ನು ಏಕೈಕ ಶಿಕ್ಷಣ ಮಾಧ್ಯಮವನ್ನಾಗಿ ಹೇರಲು ಬರುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದೆ. ಕೋರ್ಟ್ ನಿಂದ ಬೇಸೆತ್ತ ಇಡೀ ಕರ್ನಾಟಕದ ಕ ನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದೆ.

ನಿನ್ನೆಯಿಂದಲೇ ಪ್ರತಿಭಟನೆಗೆ ಕರೆ ನೀಡಲಾಗಿದ್ದು ಕರವೇ ಸೇರಿಂದತೆ ಪ್ರತಿಭಟನೆ ನಡೆಸುತ್ತಿದೆ.

ಈ ಹಕ್ಕು ಸಂವಿಧಾನದ 19(1)ನೆಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎದು ನ್ಯಾಯಾಲಯ ಸಾರಿರುವುದು ಅತ್ಯಂತ ಮಹತ್ವದ ಬೆಳವಣಿಗೆ. ಮಾತೃಭಾಷೆ ಮಾಧ್ಯಮದ ಬಲವಂತ ಹೇರಿಕೆಯು ಮೂಲಭೂತ ಹಕ್ಕುಗಳನ್ನು ಬಾಧಿಸುತ್ತದೆ. ಅಲ್ಪಸಂಖ್ಯಾತರ ಮೇಲೆ ಮಾತೃಭಾಷೆ ಮಾಧ್ಯಮದ ಬಲವಂತ ಹೇರಿಕೆ ಸಂವಿಧಾನದ ಹಕ್ಕುಗಳ ಉಲ್ಲಂಘನೆ. ಸಂವಿಧಾನದ 350(ಎ) ಕಲಮಿನ ಪ್ರಕಾರ ಮಾತೃಭಾಷೆ ಎಂಬುದರ ಅರ್ಥ, ನಿರ್ದಿಷ್ಟ ರಾಜ್ಯವೊಂದರ ಭಾಷಾ ಅಲ್ಪಸಂಖ್ಯಾತರ ಮಾತೃಭಾಷೆ ಎಂದು ನ್ಯಾಯಾಲಯ ಹೇಳಿದೆ. ಪರಿಣಾಮವಾಗಿ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲೇ ನೀಡಬೇಕು ಎಂಬ ರಾಜ್ಯ ಸರ್ಕಾರದ ಆದೇಶ ಅನೂರ್ಜಿತ ಆಗಿದೆ.

ಮುಖ್ಯನ್ಯಾಯಮೂರ್ತಿ ಆರ್.ಎಂ.ಲೋಧ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ನ್ಯಾಯಪೀಠ ಅರವತ್ತೇಳು ಪುಟಗಳ ಸುದೀರ್ಘ ತೀರ್ಪಿನಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಿದೆ. ಈ ಸಂಬಂಧ ಕಳೆದ ಫೆಬ್ರವರಿಯಲ್ಲಿ ಮೂರು ದಿನಗಳ ಕಾಲ ವಾದ ಪ್ರತಿವಾದ ಮಂಡನೆಯನ್ನು ಆಲಿಸಿದ್ದ ನ್ಯಾಯಮೂರ್ತಿ ಲೋಧ ನೇತೃತ್ವದ ಸಂವಿಧಾನಿಕ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತ್ತು.

ಮಾತೃಭಾಷಾ ಶಿಕ್ಷಣ ಮಾಧ್ಯಮವನ್ನು ಕಡ್ಡಾಯ ಮಾಡಿದ್ದ ರಾಜ್ಯ ಸರಕಾರದ ಕ್ರಮದ ವಿರುದ್ಧ ಖಾಸಗಿ ಶಾಲೆಗಳು ನಡೆಸಿದ ಇಪ್ಪತ್ತು ವರ್ಷಗಳ ಸುದೀರ್ಘ ಕಾನೂನು ಸಮರಕ್ಕೆ ತೆರೆ ಬಿದ್ದಂತಾಗಿದೆ

By suddi9

Leave a Reply

Your email address will not be published. Required fields are marked *