ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ನಾಡು ಎಂಬಲ್ಲಿ ಕಳೆದ ಐದಾರು ತಿಂಗಳ ಹಿಂದೆಯಷ್ಟೇ ರೂ 40ಲಕ್ಷ ವೆಚ್ಚದಲ್ಲಿ ಪುನನಿರ್ಮಾಣಗೊಂಡ ಸೇತುವೆ ಮೇಲೆ ಪೂರ್ಣ ಪ್ರಮಾಣದಲ್ಲಿ ಕಾಂಕ್ರೀಟು ಅಥವಾ ಡಾಂಮರೀಕರಣಗೊಳಿಸದ ಪರಿಣಾಮ ಮಳೆನೀರು ಹರಿದು ಸೇತುವೆ ಬದಿಯಲ್ಲೇ ಹರಿದು ತಡೆಗೋಡೆಗೆ ಹಾನಿ ಉಂಟು ಮಾಡುತ್ತಿದ್ದರೂ ಜನಪ್ರತಿನಿಧಿಗಳು ಈ ಬಗ್ಗೆ ಮೌನವಾಗಿದ್ದಾರೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

