ಕೈಕಂಬ: ಸಮಾಜ ಕಾರ್ಯ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಕೊಣಾಜೆ, ದಿಶಾ ಟ್ರಸ್ಟ್ ಕೈಕಂಬ ಮತ್ತು ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಹಾಗೂ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಿನ್ನಿಕಂಬ್ಳ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳು ಮಾಹಿತಿ ಶಿಬಿರವು ನ.19ರಂದು ಗುರುವಾರ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಿನ್ನಿಕಂಬ್ಳ ಇಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದಿಶಾ ಟ್ರಸ್ಟ್ ಕೈಕಂಬ ಇದರ ನಿರ್ದೇಶಕರು ಸಿಲ್ವೆಸ್ಟ್‍ರ್ ಡೀಸೋಜಾ ಉದ್ಘಾಟಿಸಿ ಮಾತನಾಡಿ ಮಕ್ಕಳ ಹಕ್ಕುಗಳ ಜೊತೆ ಮಕ್ಕಳ ಕರ್ತವ್ಯಗಳು ಅಗತ್ಯ ಎಂದು ಹೇಳಿದರು. ಅಧ್ಯಕ್ಷತೆಯನ್ನು ರಜೀಯಾ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಿನ್ನಿಕಂಬ್ಳ ಮುಖ್ಯೋಪಾದ್ಯಾಯಿನಿ ಇವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಶಾ ಬೇಕರ್ ಪಡಿ ವೆಲೋರೆಡ್ ಇವರು ಮಾತನಾಡಿ ಒಂದು ಮಗು ಗರ್ಭವಸ್ಥೆಯಲ್ಲಿ ಇರುವಾಗಲೇ ಬದುಕುವ ಹಕ್ಕನ್ನು ಪಡೆದುಕೊಂಡಿರುತ್ತೆ. ತಂದೆ/ತಾಯಿಯಾದವರು ಮಕ್ಕಳಿಗೆ ವೈದ್ಯಕೀಯ ಹಾಗೂ ಪೌಷ್ಠಿಕ ಆಹಾರವನ್ನು ಒದಗಿಸುವುದು ಒಂದು ಮುಖ್ಯ ಹಕ್ಕಾಗಿದೆ ಹಾಗೂ ಮಕ್ಕಳು ಬೆಳೆಯಲು ಸುಂದರ ವಾತಾವರಣ ನಿರ್ಮಿಸುವುದು.
ಮನೆಯಲ್ಲಿ ತಂದೆ/ತಾಯಿ, ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ರಕ್ಷಣೆ ನೀಡುವುದು ಮತ್ತು ಸಮಾಜ ಬಾಹಿರ ವಿಷಯಗಳಿಂದ ಮಕ್ಕಳನ್ನು ರಕ್ಷಿಸಿದಲ್ಲಿ ಮಕ್ಕಳ ಏಳಿಗೆ ಸಾಧ್ಯ.
ಮಕ್ಕಳಿಗೆ ಅವಕಾಶಗಳನ್ನು ಕಲ್ಪಿಸಿದಲ್ಲಿ ಮಕ್ಕಳ ಪ್ರಗತಿ ಸಾಧ್ಯ. ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಬೇಕು. ಮಕ್ಕಳ ಗ್ರಾಮ ಸಭೆಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಆ ಶಾಲೆಯ ಸಮುದಾಯದ ಪ್ರಗತಿ ಸಾಧ್ಯ.
ಮಕ್ಕಳು ಎಲ್ಲಾ ಧರ್ಮಗಳ ಹಬ್ಬಗಳನ್ನು ಸಮಾನವಾಗಿ ಸ್ವೀಕರಿಸಿ, ಒಟ್ಟಾಗಿ ಆಚರಿಸುವುದು, ಯಾವುದೇ ತಾರತಮ್ಯ ತೋರಬಾರದು. ಸಮಾಜಕಾರ್ಯ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಕೊಣಾಜೆ, ಮತ್ತು ದಿಶಾ ಟ್ರಸ್ಟ್ ಕೈಕಂಬ, ಪ್ರಜ್ಞಾ ಸಲಹಾಕೇಂದ್ರ ಕಂಕನಾಡಿ ಮಂಗಳೂರು, ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಿನ್ನಿಕಂಬ್ಳ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ “ಮಕ್ಕಳ ಹಕ್ಕುಗಳು ಮಾಹಿತಿ ಶಿಬಿರ” ಕಾರ್ಯಕ್ರಮದಲ್ಲಿ ಹೇಳಿದರು.
ಮುಖ್ಯ ಅತಿಥಿಯಾಗಿ ರಮೇಶ್.ಮಾ.ಆಡಿನ್ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಕೊಣಾಜೆ ಸಮಾಜ ಕಾರ್ಯ ಉಪನ್ಯಾಸಕರು ಇವರು ಮಕ್ಕಳ ಪೋಷಣೆಯ ಜೊತೆಗೆ ಮಕ್ಕಳಿಗೆ ಅವರ ಹಕ್ಕುಗಳನ್ನು ಒದಗಿಸಿದಲ್ಲಿ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಪ್ರಾಸ್ತಾವಿಕ ಮಾತುಗಳಲ್ಲಿ ಹೇಳಿದರು.
ಪ್ರಥಮ ಸಮಾಜಕಾರ್ಯ ವಿಭಾಗ ಮಂಗಳೂರು ವಿಶ್ವ ವಿದ್ಯಾನಿಲಯ ಮಂಗಳಗಂಗೋತ್ರಿ ಕೊಣಾಜೆ ಕುಮಾರಿ ಕಾವೇರಿ ಇವರು ಕಾರ್ಯಕ್ರಮ ನಿರೂಪಿಸಿ, ಕುಮಾರಿ ಸವಿತಾ ಸ್ವಾಗತಿಸಿ ಹಾಗೂ ವಂದಿಸಿದರು.

