ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರ ಮುಖಾಂತರ ನಿರಂತರ ಬೆಲೆಯೇರಿಕೆ/ ಸಾರ್ವಜನಿಕ ಪ್ರಯಾಣ ದರ ಏರಿಕೆ
ಸಾರ್ವಜನಿಕ ಬಸ್ ಪ್ರಯಾಣ ದರ ಏರಿಕೆಯನ್ನು ಇಳಿಸುವ ಬಗ್ಗೆ ಹಾಗೂ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ನಿಯಂತ್ರಿಸುವ ಬಗ್ಗೆ ಆಗ್ರಹ

bjp manavi

bjp1
ಅಧಿಕಾರಕ್ಕೆ ಬಂದಾಗಿನಿಂದಲೂ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಾ ಬಂದ ಶ್ರೀ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಬಸ್ ದರಗಳನ್ನು ಏರಿಸುವ ಮೂಲಕ ರಾಜ್ಯದ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.ಈಗಾಗಲೇ ಕೇಂದ್ರ ಸರಕಾರದ ಅಸಮರ್ಪಕ ಆರ್ಥಿಕ ನೀತಿಗಳಿಂದ ಮಾರುಕಟ್ಟೆಯಲ್ಲಿ ದಿನನಿತ್ಯದ ವಸ್ತುಗಳಬೆಲೆಗಳು ಗಗನಕ್ಕೆ ಏರುತ್ತಿದ್ದು, ಮಧ್ಯಮವರ್ಗದ ಜನರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಈಗ ರಾಜ್ಯದ ಕಾಂಗ್ರೆಸ್ ಸರಕಾರ ಏಕಾಏಕಿ ಕೆಎಸ್ಆರ್ಟಿಸಿ ದರಗಳನ್ನು ಶೇ.10.5 ರಷ್ಟು ಏರಿಸಿ ಆದೇಶ ಹೊರಡಿಸಿದ್ದಾರೆ. ಲೋಕಸಭಾ ಚುನಾವಣೆಗಳು ಮುಗಿಯುವುದನ್ನೇ ಕಾದುಕೊಂಡಿದ್ದ ರಾಜ್ಯ ಸರಕಾರ ಚುನಾವಣೆ ಮುಗಿದ ಕೂಡಲೇ ಬಸ್ ದರಗಳನ್ನು ಏರಿಸಿದೆ.ಬಸ್ದರ ಏರಿಕೆಗೆ ಡೀಸೆಲ್ ಬೆಲೆ ಏರಿಕೆಯನ್ನು ಕಾರಣವಾಗಿ ಕೊಡುವ ರಾಜ್ಯ ಸರಕಾರದ ಮಂತ್ರಿಗಳು, ಸಾರ್ವಜನಿಕ ಸಾರಿಗೆಗೆ ಡೀಸೆಲ್ ಬೆಲೆಯನ್ನು ಸಬ್ಸಿಡಿ ದರದಲ್ಲಿ ನೀಡಬೇಕೆಂಬ ಒತ್ತಡವನ್ನು ಮಾತ್ರ ಹೇರುತ್ತಿಲ್ಲ. ಇದಲ್ಲದೆ ಖಾಸಗಿ ಪೆಟ್ರೋಲ್ ಬಂಕ್ಗಳಿಂದ ಡೀಸೆಲ್ ಖರೀದಿಸುತ್ತಿರುವುದು ಸಾರಿಗೆ ಸಂಸ್ಥೆಗೆ ಡೀಸೆಲ್ ಬೆಲೆ ಹೆಚ್ಚಾಗಲು ಕಾರಣವೆಂದೂ ಹೇಳಲಾಗುತ್ತಿದೆ. ಆದರೆ ಸಾರಿಗೆ ಇಲಾಖೆಯಲ್ಲಿ ಆಗುತ್ತಿರುವ ಸೋರಿಕೆ, ಡೀಸೆಲ್ ಖರೀದಿಗೆ ಅಗತ್ಯವಾದ ಸರಳ ಕ್ರಮಗಳ ಬಗ್ಗೆ ಯೋಚಿಸದ ಸರಕಾರ ಸಾರ್ವಜನಿಕರ ಹಿತ ಮರೆತು ಬಸ್ ದರವನ್ನು ಏರಿಸುತ್ತಿರುವುದು ಅತ್ಯಂತ ಖಂಡನೀಯ. ಈಗಾಗಲೇ ಏರಿಸಿರುವ ಬಸ್ ದರಗಳನು ಕೂಡಲೇ ಇಳಿಸಬೇಕು ಎಂಬ ತೀವ್ರ ಆಗ್ರಹವನ್ನು ಬಿಜೆಪಿ ಮಾಡುತ್ತಿದೆ.
ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯಗಳು-
ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯಗಳಿಗೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಎಚ್ಚೆತ್ತುಕೊಂಡು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಸ್ಫೋಟದ ಬಗ್ಗೆ ಮಾಹಿತಿಯಿದ್ದರೂ ನಿರ್ಲಕ್ಷ್ಯ ಧೋರಣೆ ತಾಳಿದ ರಾಜ್ಯ ಸರಕಾರದ ನಡೆಯಿಂದಾಗಿ ಬೆಂಗಳೂರು ಗೌಹಾಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಸ್ಫೋಟ ಸಂಭವಿಸಿದೆ. ಬೆಂಗಳೂರಿನಲ್ಲಿ ನಡೆದ ಮೋದಿ ರ್ಯಾಲಿಯ ಸಂದರ್ಭದಲ್ಲೇ ಭಯೋತ್ಪಾದಕ ದಾಳಿ ನಡೆಸಬಹುದೆಂಬ ವರದಿಗಳು ಬಿತ್ತರವಾಗಿದ್ದವು. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಹರಿದಾಡುತ್ತಿರುವ ಹವಾಲ ಹಣವೂ ಈ ಭಯೋತ್ಪಾದಕ ಕೃತ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬ ಮಾತುಗಳೂ ಬಹಿರಂಗಗೊಂಡಿದೆ. ಆದರೆ ಮಾಹಿತಿ ಲಭ್ಯವಾಗಿದ್ದರೂ ನಿರ್ಲಕ್ಷ್ಯ ವಹಿಸಿ ಈ ಬಗ್ಗೆ ಯಾವುದೇ ಸೂಕ್ತ ಕ್ರಮಕೈಗೊಳ್ಳದ ಕೇಂದ್ರದ ಯುಪಿಎ ಸರಕಾರ ಹಾಗೂ ರಾಜ್ಯ ಸರಕಾರಗಳೇ ಇದಕ್ಕೆ ನೇರ ಹೊಣೆಯಾಗಿವೆ. ಈಗ ಬಂಧಿತರಾಗಿರುವ ಉಗ್ರರು ನೀಡಿದ ಮಾಹಿತಿಯ ಪ್ರಕಾರ ಈ ಎಲ್ಲಾ ಸಂಚು ದಕ್ಷಿಣ ಭಾರತದಲ್ಲೇ ರೂಪಿತವಾಯಿತೆಂಬ ಅಂಶಗಳೊಂದಿಗೆ ಬಂಧನದಲ್ಲಿರುವ ಅನೇಕ ಉಗ್ರರು ಕರಾವಳಿ ಮೂಲದವರು ಅಥವಾ ಕರಾವಳಿ ನಂಟನ್ನು ಹೊಂದಿರುವವರು ಆಗಿದ್ದಾರೆ ಎಂಬ ಅಂಶದ ಗಂಭೀರತೆಯನ್ನು ರಾಜ್ಯ ಸರಕಾರ ಅರಿಯಬೇಕು. ಕೇಂದ್ರದ ಯುಪಿಎ ಸರಕಾರ ಈಗ ಬಂಧಿತರಾಗಿರುವ ಉಗ್ರರ ಮೂಲಕ ಎಲ್ಲಾ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಭಯೋತ್ಪಾದಕ ಕೃತ್ಯಗಳ        ಕಾರಣೀಕರ್ತರ ಬಗ್ಗೆ ನಿರ್ದಾಕ್ಷಿಣ್ಯ  ಕ್ರಮ ಕೈಗೊಳ್ಳಬೇಕು ಮತ್ತು ಕರಾವಳಿ ಪ್ರದೇಶ ಹಾಗೂ ರಾಜ್ಯದೊಳಗೆ ನಡೆಯುತ್ತಿರುವ ಈ ಚಟುವಟಿಕೆಗಳ ನಿಗ್ರಹವನ್ನು ತಡೆಯಲು ರಾಜ್ಯ ಸರಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂಬ ಆಗ್ರಹವನ್ನು ಬಿಜೆಪಿ ಮಾಡುತ್ತಿದೆ. ಸರಕಾರ ಈ ವಿಷಯದಲ್ಲಿ ನಿರಾಸಕ್ತಿ ವಹಿಸಿದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡುತ್ತಿದೆ.

By suddi9

Leave a Reply

Your email address will not be published. Required fields are marked *