ವಿಟ್ಲ: ಚಂದಳಿಕೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಗಶ್ರೀ ಫ್ರೆಂಡ್ಸ್ ಅಬೀರಿ ಮತ್ತು ಯುವ ಕೇಸರಿ ಅತಿಕಾರಬೈಲು ಇವರ ಸಂಯುಕ್ತ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಸಾರ್ವಜನಿಕ ಪುರುಷರ ಮುಕ್ತ ಕಬಡ್ಡಿ ಮತ್ತು ಹಗ್ಗ ಜಗ್ಗಾಟದ ` ದೀಪಾವಳಿ ಟ್ರೋಫಿ 2015′ ಹಾಗೂ ಸನ್ಮಾನ ಕಾಯ್ಕ್ರಮದ ಉದ್ಘಾಟನಾ ಕಾರ್ಯಕ್ರಮ ನ.22 ರಂದು ಭಾನುವಾರ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಅರುಣ್ ವಿಟ್ಲ ನೆರವೇರಿಸಿದರು.
ಕ್ರೀಡಾಂಗಣದ ಉದ್ಘಾಟನೆಯನ್ನು ಪುತ್ತೂರು ವಲಯ ವಿಟ್ಲ ಶಾಖೆಯ ಅರಣ್ಯಾಧಿಕಾರಿ ಲೋಕೇಶ್ ಎಸ್ ಎನ್ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಿಟ್ಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಭವಾನಿ ರೈ ಕೊಲ್ಯ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ತಾಲೂಕು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಘ ಚಾಲಕ ವೆಂಕಟೇಶ್ವರ ಅಮೈ, ಚಂದಳಿಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹರಿಣಾಕ್ಷಿ ಕೊಪ್ಪಳ, ಉಪಾಧ್ಯಕ್ಷ ಲಕ್ಷ್ಮಣ ಗೌಡ, ಕ್ರೀಡಾ ಸಮಿತಿ ಗೌರವ ಸಲಹೆಗಾರ ಈಶ್ವರ ಬಂಗೇರ ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ತೀರ್ಥರಾಮ ಇವರು ಭಾಗವಹಿಸಿದ್ದರು. ವೇದಿಕೆಯಲ್ಲಿ ವಿಠಲ ಪೂಜಾರಿ ಅತಿಕಾರಬೈಲು, ಶಶಿ ಕೇಪುಳಗುಡ್ಡೆ, ದಿವಾಕರ ಶೆಟ್ಟಿ ಅಬೀರಿ, ವನೀತ್ ಅಬೀರಿ, ಈಶ್ವರ ಬಂಗೇರ ಅಬೀರಿ ಉಪಸ್ಥಿತರಿದ್ದರು. ಸುಶಾಂತ್ ಸಾಲಿಯಾನ್ ಚಂದಳಿಕೆ ಸ್ವಾಗತಿಸಿದರು. ಪದ್ಮನಾಭ ಶೆಟ್ಟಿ ಚಪುಡಿಯಡ್ಕ ವಂದಿಸಿದರು. ಗಂಗಾಧರ ಸಿ ಹೆಚ್ ನಿರೂಪಿಸಿದರು. ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು

