ಮೂಡುಬಿದರೆ: ಮಕ್ಕಳ ದಿನಾಚರಣೆಯಂದು ಭಾರತ ಸರ್ಕಾರ ಕೊಡಮಾಡುವ ರಾಷ್ಟ್ರಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ , ಬಹುಮುಖ ಪ್ರತಿಭೆಯ ಪಂಚಮಿ ಮಾರೂರಿಗೆ ಶನಿವಾರ ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಂಚಮಿಯ ತಂದೆ ಪಾಶ್ರ್ವನಾಥ್ ಹಾಗೂ ತಾಯಿ ದೀಪಶ್ರೀ, ಸಹೋದರ ಪ್ರಥಮ್ ಮಾರೂರು ಭಾಗವಹಿಸಿದರು.

ರಾಜ್ಯ ಪ್ರಶಸ್ತಿ ಸ್ವೀಕಾರ: ರಾಜ್ಯ ಸರ್ಕಾರದ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಮಾಡುವ ರಾಜ್ಯ ಪ್ರಶಸ್ತಿಗೂ ಪಂಚಮಿ ಆಯ್ಕೆಯಾಗಿದ್ದರು.
ರಾಜ್ಯಪಾಲ ವಜುಭಾಯಿವಾಲ, ಕಬ್ಬನ್ ಪಾರ್ಕ್ ನ ಜವಾಹರ್ ಲಾಲ್ ಬಾಲಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಪಂಚಮಿ ಪರವಾಗಿ ಪ್ರೋತ್ಸಾಹಕ ಸುದೇಶ್ ಜೈನ್ ಮಕ್ಕಿಮನೆ ಪ್ರಶಸ್ತಿ ಸ್ವೀಕರಿಸಿದರು.
