ಮಂಗಳೂರು: ಏಪ್ರಿಲ್ 23 ರಂದು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ತನ್ನ ಪ್ರಿಯಕರನ ಜತೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದ್ದಾರೆ.

ವಿಟ್ಲ ಕಸಬಾ ಗ್ರಾಮದ ಕಾಶಿಮಠ ನಿವಾಸಿ ರಮಣಿಕ್ ಅವರ ಪತ್ನಿ ಸುಮಿತ್ರ(29) ಎಂಬವರು ವಿಟ್ಲದ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದು, ಏಪ್ರಿಲ್ 23 ರಂದು ಬೆಳಿಗ್ಗೆ ತನ್ನ ಮನೆಯಿಂದ ಕೆಲಕ್ಕೆಂದು ತನ್ನ ಪತಿ ರಮಣಿಕ್ ಜತೆ ತೆರಳಿದ್ದರು. ಸುಮಿತ್ರ ಸಂಜೆವರೆಗೂ ಮನೆಗೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಮನೆಯವರು ಎಲ್ಲೆಡೆ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಮಂಗಳವಾರ ಪತ್ರಿಕೆಗಳಲ್ಲಿ ಮಹಿಳೆ ಚಿತ್ರ ಪ್ರಕಟಗೊಂಡಿತ್ತು. ಈ ಬಗ್ಗೆ ನೋಡಿದ ಸಾರ್ವಜನಿಕರು ಸುಮಿತ್ರ ಹಾಗೂ ಆಕೆಯ ಪ್ರಿಯಕರ ವಿಟ್ಲ ಪಡ್ನೂರು ಗ್ರಾಮದ ಕಡಂಬು ಸಮೀಪ ನಿವಾಸಿ ಯೋಗಿಶ್ ಎಂಬಿಬ್ಬರು ಸುಬ್ರಹ್ಮಣ್ಯದಲ್ಲಿ ಇರುವುದನ್ನು ಪತ್ತೆ ಹಚ್ಚಿ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ಮುಗಿಸಿದ ಪೊಲೀಸರು ಇಬ್ಬರನ್ನೂ ಅವರವರ ಮನೆಗೆ ಕಳಿಸಿಕೊಟ್ಟಿದ್ದಾರೆ

