ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಇದರ ನೂತನ ಸ್ಥಾನೀಯ ಸಮಿತಿ ರಚನೆಯ ಪ್ರಕ್ರಿಯೆಯಾದ “ಸಂಘಟನಾ ಪರ್ವ-2015” ರಾಜ್ಯಾದ್ಯಂತ ನಡೆಯುತ್ತಿದ್ದು ಇದರ ಅಂಗವಾಗಿ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಬೂತ್ ಸಂಖ್ಯೆ 119 ರ ಅಜ್ಜಿಬೆಟ್ಟು ವಾರ್ಡ್ ಇದರ ನೂತನ ಅಧ್ಯಕ್ಷರಾಗಿ ಲೋಕೇಶ್ ಮಠ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ ಅಜ್ಜಿಬೆಟ್ಟು ಆಯ್ಕೆಯಾದರು.
ಮಾಜಿ ಪುರಸಭಾ ಸದಸ್ಯ ಗೋಪಾಲ ಸುವರ್ಣ ಅಧ್ಯಕ್ಷತೆಯಲ್ಲಿ ಅಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಬದಲ್ಲಿ ಮಾಜಿ ಪುರಸಭಾ ಸದಸ್ಯೆ ವಿದ್ಯಾವತಿ, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಕೃಷ್ಣಪ್ಪ ಪೂಜಾರಿ ದೋಟ ಮತ್ತಿತರರು ಉಪಸ್ಥಿತರಿದ್ದರು.


