ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮದ ನಾಟಿ ಬೀದಿ ಶ್ರೀ ಕೋದಂಡರಾಮಚಂದ್ರ ಹನುಮಂತ ಗರುಡ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಬಂಟ್ವಾಳ ಅಂಚನ್ಸ್ ಗಾರ್ಮೆಂಟ್ಸ್ನ ಮಾಲಕ ಪ್ರಕಾಶ್ ಅಂಚನ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಯನ್.ಪುರುಷೋತ್ತಮ ಬಂಗೇರಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಪದ್ಮನಾಭ ಮಯ್ಯ, ಉಪಧ್ಯಕ್ಷರಾಗಿ ಪುರುಷೋತ್ತಮ ಸಾಲ್ಯಾನ್ ಶೇಡಿಗುರಿ, ಪ್ರೇಮನಾಥ ಶೆಟ್ಟಿ ಅಂತರ, ಆನಂದ ಸಾಲ್ಯಾನ್ ಸೇಣರಪಾಲು, ಉಮೇಶ್ ಬೋಳಂತೂರು, ಮಾಧವ ಕರ್ಬೆಟ್ಟು, ಕಿಶೋರ್ ಶೆಟ್ಟಿ ಅಂತರ, ಪ್ರಧಾನಕಾರ್ಯದರ್ಶಿಯಾಗಿ ಸಂಜೀವ ಪೂಜಾರಿ ನಾಟಿ, ಜತೆ ಕಾರ್ಯದರ್ಶಿಯಾಗಿ ಎನ್.ರಾಜೇಶ್, ವಿಠಲ ಕೋಟ್ಯಾನ್, ಕೋಶಾಧಿಕಾರಿಯಾಗಿ ಕೃಷ್ಣಪ್ಪ ಪೂಜಾರಿ ನಾಟಿ ಬೀದಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭ ನರಿಕೊಂಬು ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಪ್ರಮುಖರಾದ ಪ್ರೇಮನಾಥ ಶೆಟ್ಟಿ, ಆನಂದ ಸಾಲ್ಯಾನ್, ರಾಜಾ ಬಂಟ್ವಾಳ, ಡಾ.ಪ್ರದೀಪ್ ಕುಮಾರ್, ಸಂಜೀವ ಸಪಲ್ಯ, ಮನೋಜ್ ಕುಮಾರ್ ಮತ್ತಿತರರು ಹಾಜರಿದ್ದರು.
