ಬಂಟ್ವಾಳ: ತ್ಯಾಜ್ಯ ವಿಲೇವಾರಿಯ ಗುತ್ತಿಗೆಗೆ ಸಂಬಂಧಿಸಿ ಬಂಟ್ವಾಳ ಪುರಸಭೆಯ ಟೆಂಡರ್ ಪ್ರಕ್ರಿಯೆಗೆ ರಾಜ್ಯ ಉಚ್ಛನ್ಯಾಯಾಲಯ ತಡೆಯಾಜ್ಷೆ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.ಈ ಮೊದಲು ಗುತ್ತಿಗೆದಾರ ಶರತ್ ಶೆಟ್ಟಿ ಎಂಬವರು ಕಸವಿಲೇವಾರಿಯ ಹೊಣೆಹೊತುಕೊಂಡಿದ್ದರು. ಇತ್ತೀಚೆಗೆ ಬಂಟ್ವಾಳ ಪುರಸಭೆ ನಡೆಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಶರತ್ ಶೆಟ್ಟಿ ಹಾಗೂ ಅಬ್ದುಲ್ ಸಲಾಂ ಎಂಬವರು ಭಾಗವಹಿಸಿದ್ದರು.

ಈ ಟೆಂಡರ್ ನಲ್ಲಿ ಶರತ್ ಶೆಟ್ಟಿ ಅರ್ಹತೆ ಪಡೆದಿದ್ದರೂ, ಅವರು ಈ ಹಿಂದೆ ಸಮರ್ಪಕವಾಗಿ ತ್ಯಾಜ್ಯವಿಲೇವಾರಿ ನಡೆಸಿಲ್ಲ ಎಂಬ ಆರೋಪದಲ್ಲಿ ಕಸ ವಿಲೇವಾರಿಯ ಗುತ್ತಿಗೆಯನ್ನು ಅವರಗೆ ನೀಡದಂತೆ ಹಾಗೂ ಶರತ್ ಶೆಟ್ಟಿ ಯವರು ನಮೂದಿಸಿದ ಕಡಿಮೆ ದರಕೆ ದರಸಂಧಾನ ಮಾಡಿ ಅಬ್ದುಲ್ ಸಲಾಂ ಅವರಿಗೆ ಗುತ್ತಿಗೆ ನೀಡುವಂತೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು.

ಈ ನಿರ್ಣಯಕ್ಕೆ ಜಿಲ್ಲಾಧಿಕಾರಿಯವರು ಆಡಳಿತಾತ್ಮಕ ಮಂಜೂರಾತಿಯನ್ನೂ ನೀಡಿದ್ದರು. ಈ ಬಗ್ಗೆ ಗುತ್ತಿಗೆದಾರ ಶರತ್ ಶೆಟ್ಟಿಯವರು ಉಚ್ಛ ನ್ಯಾಯಾಲಯದಲ್ಲಿ ಪುರಸಭಾ ಅಧ್ಯಕ್ಷರು ಹಾಗೂ ಗುತ್ತಿಗೆದಾರ ಅಬ್ದುಲ್ ಸಲಾಂ ವಿರುದ್ದ ರಿಟ್ ಅರ್ಜಿಯನ್ನು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಕಳೆದ ಸೆ.23 ರಂದು ಮುಂದಿನ ಆದೇಶದವರೆಗೆ ಈ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ

By suddi9

Leave a Reply

Your email address will not be published. Required fields are marked *