ಬಂಟ್ವಾಳ:ಪುರಸಭೆಯ ಕಾನೂನು ಬಾಹಿರ ನಿರ್ಣಯದ ಕುರಿತ ಪ್ರಕರಣದಲ್ಲಿ ತೀರ್ಪು ನೀಡಲು ವಿನಾಕಾರಣ ವಿಳಂಬನೀತಿ ಅನುಸರಿಸುತ್ತಿದ್ದಾರೆಂಬ ಆರೋಪದಲ್ಲಿ ಮಂಗಳೂರು ಸಹಾಯಕ ಕಮಿಷನರ್ ಅವರನ್ನು ಬಂಟ್ವಾಳ ಪುರಸಭಾ ಸದಸ್ಯರಿಬ್ಬರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಗುರುವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆದಿದೆ.

2014ರಜೂ.16ರಂದು ಎಸ್.ಎಫ್.ಸಿ. 13ನೇ ಹಣಕಾಸಿನ ಕುರಿತಂತೆ ಪುರಸಭೆ ನಿಯಮ ಬಾಹಿರವಾಗಿ ಕೈಗೊಂಡ ನಿರ್ಣಯದ ಬಗ್ಗೆ ಎ.ಸಿ.ಕೋರ್ಟನಲ್ಲಿರುವ ಕೇಸಿನ ದಿನಾಂಕಗೊತ್ತು ಪಡಿಸಲಾಗಿತ್ತು. ಕಳೆದ 1ವರ್ಷ 4ತಿಂಗಳಿನಿಂದ ಹಲವಾರು ಬಾರಿ ವಿಚಾರಣೆ ನಡೆಸಿದ್ದ ಸಹಾಯಕ ಕಮಿಷನರ್ ರಲ್ಲಿ ಇನ್ನಪ್ಟು ವಿಳಂಬ ಮಾಡದೇ ತೀರ್ಪು ನೀಡುವಂತೆ ಹಾಗೂ ತಾವು ಹೊರಡಿಸುವ ಯಾವುದೇ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿಕೊಂಡಿದ್ದೆವು ಎಂದು ಸದಸ್ಯರಾದ ಗೋವಿಂದಪ್ರಭು,ದೇವದಾಸ ಶಟ್ಟಿ ತಿಳಿಸಿದ್ದಾರೆ.

ಆದರೆ ಗುರುವಾರ ಎ.ಸಿ.ಯವರ ಮುಂದೆ ಹಾಜರಾದಾಗ ನೀವು 306ರಂತೆ ಅರ್ಜಿ ನೀಡಿ ಪರಿಶೀಲಿಸುದಾಗಿ ಎ.ಸಿ.ಯವರು ಹೇಳಿದ್ದು ಸದಸ್ಯರನ್ನು ಕೆರಳಿಸಿತ್ತು.ಇದನ್ನು ತಿಳಿಸಲು ಒಂದು ವರ್ಷ ಬೇಕಾಯಿತೆ ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಸದಸ್ಯರಾದ ಗೋವಿಂದಪ್ರಭು,ದೇವದಾಸಶೆಟ್ಟಿಯವರು ತರಾಟೆಗೆ ತೆಗೆದುಕೊಂಡರು.ಈ ವಿದ್ಯಮಾನಕ್ಕೆ ಕೆಲ ವಕೀಲರು, ಸಾರ್ವಜನಿಕರು ಮೂಕ ಪ್ರೆಕ್ಷೇಕರಾಗಿ ನಿಂತಿದ್ದರು.

By suddi9

Leave a Reply

Your email address will not be published. Required fields are marked *