ಬಂಟ್ವಾಳ; ನವಚೇತನ ಸೇವಾ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಕನರ್ಾಟಕ ರಾಜ್ಯ ದಲಿತ್ ಮಹಾಸಭಾ (ಅಂಬೇಡ್ಕರ್ ತತ್ವ) ದ.ಕ.ಜಿಲ್ಲಾ ಶಾಖೆಯ ಸಹಯೋಗದೊಂದಿಗೆ ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 124 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಭಾನುವಾರ ಬಿ.ಸಿ.ರೋಡು ಗಾಣದ ಪಡ್ಪುವಿನ ಬ್ರಹ್ಮ ಶ್ರೀ ನಾರಾಯಣ ಗುರುಮಂದಿರದ ಸಂವಿಧಾನ ಶಿಲ್ಪಿ ವೇದಿಕೆಯಲ್ಲಿ ನಡೆದ 13 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 5 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

12.10 ರ ಶುಭಲಗ್ನದಲ್ಲಿ ಮಂಗಳೂರು ಕಿಲೆಂಜಾರುವಿನ ಸದಾಶಿವ ಮತ್ತು ಬಂಟ್ವಾಳ ಸಂಗಬೆಟ್ಟುವಿನ ಸುಮಾ, ಮಂಗಳೂರು ಕೊಳವೂರಿನ ಗೋಪಾಲ ಮತ್ತು ಬಂಟ್ವಾಳ ಕರಿಯಂಗಳದ ಅಮಿತಾ, ಬಳ್ಳಾರಿ ಹಗರಿಬೊಮ್ಮನಹಳ್ಳಿಯ ಮುಗ್ಗಳ್ಳಿ ಶಿವರಾಜು ಮತ್ತು ಬಂಟ್ವಾಳ ಪಾಣೆಮಂಗಳೂರು ಶಾಂತಿಗುಡ್ಡೆ ಯ ಸುನಿತಾ, ಮಂಗಳೂರು ತೋಡಾರುವಿನ ಕೃಷ್ಣಪ್ಪ ಮತ್ತು ಬಂಟ್ವಾಳ ಸಂಗಬೆಟ್ಟುವಿನ ಮಂಜುಳ, ಅನಂತಾಡಿ ಗೋಳಿಕಟ್ಟೆಯ ಮಹೇಂದ್ರ ಡಿ ಮತ್ತು ಕುಡಂಬೆಟ್ಟುವಿನ ಜಯಂತಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಸಭಾ ಕಾರ್ಯಕ್ರಮ’;
ಇದೇ ಸಂದರ್ಭ ನಡೆದ ಸಭಾಕಾರ್ಯಕ್ರಮವನ್ನು ಸಂಚಯಗಿರಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ಉದ್ಘಾಟಿಸಿದರು. ದೇವರನ್ನು ಕಂಡವರಿಲ್ಲ, ಆದರೆ ಅಂಬೇಡ್ಕರ್ ಎಂಬ ಮಹಾನುಭಾವ, ಇತಿಹಾಸಕಾರ, ತತ್ವಜ್ಞಾನಿ, ವಕೀಲ, ಸಂಘಟಕ, ಪರಿವರ್ತನೆಯ ಹರಿಕಾರವನ್ನು ಈ ದೇಶ ಕಂಡಿದೆ, ಅವರು ಕನಸು ಕಂಡಂತೆ ದಲಿತರು ತಮ್ಮೊಳಗೆ ಆತ್ಮಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದ ಅವರು , ಆಮೂಲಕ ಅಂಬೇಡ್ಕರ್ ರವರ ಆಶಯಗಳು ಈಡೇರುವ ಕಾಲ ಆದಷ್ಟು ಬೇಗ ಕೂಡಿ ಬರಲಿ ಎಂದರು. ಸಾಮೂಹಿಕ ವಿವಾಹವನ್ನು ಸಂಘಟಿಸುತ್ತಿರುವ ನವಚೇತನಾ ಟ್ರಸ್ಟ್ ಕುರಿತಾದ ಶ್ಲಾಘನೆಯ ಮಾತುಗಳನ್ನಾಡಿದ ಅವರು, ಒಂದು ಮದುವೆಗೆ ಕೋಟಿ ಕೋಟಿ ಹಣ ವೆಚ್ಚ ಮಾಡುವವರು ಒಂದೆಡೆಯಾದರೆ, ಇನ್ನೊಂದೆಡೆ ತುತ್ತು ಅನ್ನಕ್ಕಾಗಿ ಹಾತೊರೆಯುವವರು ಕೋಟಿಕೋಟಿ ಮಂದಿಯಿದ್ದಾರೆ. ದುಂದುವೆಚ್ಚ ಮಾಡುವವರಿಗೆ ಈ ವಿವಾಹ ಪದ್ದತಿ ಆದರ್ಶವಾಗಲಿ ಎಂದರು.
ನವಚೇತನಾ ಸೇವಾ ಟ್ರಸ್ಟ್ ನ ಅಧ್ಯಕ್ಷ ರಾಜಾ ಪಲ್ಲಮಜಲು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷೆ ವಸಂತಿಚಂದಪ್ಪ. ಪ.ಜಾತಿ. ಪ.ವರ್ಗಗಳ ಅಭಿವೃದ್ದಿ ಅಧ್ಯಯನ ಟ್ರಸ್ಟ್ ನ ಅಧ್ಯಕ್ಷ ಮೋನಂಗಯ್ಯ ಸ್ವಾಮಿ , ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಉಮೇಶ್ ಮಾವಿನಕಟ್ಟೆ, ಅಬರ್ಿಗುಡ್ಡೆ ಅಂಬೇಡ್ಕರ್ ಸಂಘದ ಅಧ್ಯಕ್ಷ ಶ್ರೀನಿವಾಸ ಅಬರ್ಿಗುಡ್ಡೆ ಅತಿಥಿಯಾಗಿ ಭಾಗವಹಿಸಿದ್ದರು.
ಸನ್ಮಾನ; ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷೆ ವಸಂತಿಚಂದಪ್ಪ, ಸಮುದಾಯ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ.ರಾಧಿಕಾ, ಕ್ರೀಡಾಪಟು ಅನಿತಾ ಪಿ.ಆರ್ ರವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ನ ಪ್ರ.ಕಾರ್ಯದಶರ್ಿ ಹರೀಶ್ ಕುಮಾರ್ ಕಡೇಶ್ವಾಲ್ಯ ಸ್ವಾಗತಿಸಿದರು. ದಲಿತ್ ಮಹಾ ಸಭಾದ ಪ್ರಧಾನ ಕಾರ್ಯದಶರ್ಿ ಜತ್ತಪ್ಪ ಪೆನರ್ೆ ವಂದಿಸಿದರು. ಚಂದ್ರಹಾಸ ಅಬರ್ಿಗುಡ್ಡೆ ಕಾರ್ಯಕ್ರಮ ನಿರ್ವಹಿಸಿದರು


