ಮೂಡುಬಿದಿರೆ: ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯವರನ್ನು ಅಪರಿಚಿತ ತಂಡ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೈದಿದ್ದು ಪ್ರಕರಣ 2ನೇ ದಿನವಾದ ಶನಿವಾರವೂ ಮೂಡುಬಿದಿರೆ ಬಂದ್ ಆಗಿತ್ತು.
ಯುವಕನ ಕೊಲೆ ಪ್ರಕರಣ

ಮೃತನ ತಂದೆ ಆನಂದ ಪೂಜಾರಿ ನೀಡಿದ ಮಾಹಿತಿಯನ್ವಯ ಗಂಟಾಲ್ಕಟ್ಟೆಯ  ಇಮ್ತಿಯಜ್, ಬದ್ರುದ್ದೀನ್, ತೋಡಾರಿನ ಶರೀಪ್ ಮತ್ತು ಸಾಣೂರಿನ ಇಲಿಯಾಸ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಬಳಿಕ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತರಾಗಿ ಬಜರಂಗದಳದ ಸುಮಾರು 100 ಮಂದಿ ವಿರುದ್ಧ ದೂರು ದಾಖಲಿಸಿಕೊಂಡರೆ

mbd_oct10_1 (8) mbd_oct10_1 (7).ಮುಬೀನ್ ಅಹ್ಮದ್ ಅವರು ತಮ್ಮ ಹೊಟೇನಲ್ಲಿ 6 ಲಕ್ಷ ನಷ್ಟ ಉಂಟಾಗಿದೆ ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.
ರಿಯಲ್ ಎಸ್ಟೆಟ್ ಕಚೇರಿಯ  ಶೇಖ್ ಇಸ್ಮಾಯಿಲ್ ಅವರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ 25 ಮಂದಿ ಹಾಗೂ ಕೋಟೆಬಾಗಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಮ್ಮದ್ ಅಶ್ರಪ್ಗೆ ಹಲ್ಲೆ, ಜೀವಬೆದರಿಕೆಯೊಡ್ಡಿದ ದೂರಿಗೆ ಸಂಬಂಧಿಸಿ ಸುಮಾರು 30 ಮಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ. ಈ ನಡುವೆ 10 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ, ಕಮೀಷನರ್ ಭೇಟಿ:
ಘಟನ ಸ್ಥಳಕ್ಕೆ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಶನಿವಾರ ಭೇಟಿ ನೀಡಿದ್ದು, ಬಳಿಕ ಮೂಡುಬಿದಿರೆ ಪ್ರವಾಸಿ ಬಂಗಲೆಯಲ್ಲಿ ಸಚಿವ ಕೆ.ಅಭಯಚಂದ್ರ ಜೈನ್ ಸಮ್ಮುಖದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಹೆಚ್ಚಿನ ಭದ್ರತೆ ವ್ಯವಸ್ಥೆ ಅವಶ್ಯಕತೆ ಇದಲ್ಲಿ ಬಳಸುವಂತೆ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ವದಂತಿಗಳ ಮೇಲೆ ನಿಗಾವಿರಿಸುವಂತೆ ಸಲಹೆ ನೀಡಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಗೆ ಮಂಗಳೂರು ಪೊಲೀಸ್ ಕಮೀಷನರ್ ಭೇಟಿ ನೀಡಿ, ತನಿಖೆ ವಿವರ ಪಡೆದುಕೊಂಡರು.
ಶನಿವಾರ ಏನೆಲ್ಲ ಆಗಿದೆ?:
ಶನಿವಾರ ಕಾಲೇಜುಗಳಲ್ಲಿ ನಡೆಯಬೇಕಾದ ಪರೀಕ್ಷೆಗಳು ರದ್ದಾಗಿದೆ. ವಿದ್ಯಾಗಿರಿಯಲ್ಲಿ ಶಾಲಾ ಕಾಲೇಜಿನ ಬಸ್ಗಳಿಗೆ ಯುವಕರ ಗುಂಪೊಂದು ತಡೆಯೊಡ್ಡಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋ ಒಂದರ ಗಾಜು ಒಡೆಯಲಾಗಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮಗಳು ರದ್ದಾಗಿದ್ದು, ಮೂಡುಬಿದಿರೆಯಲ್ಲಿ ಭಾನುವಾರ ನಡೆಯುವ ರಾಷ್ಟ್ರ ಮಟ್ಟದ ಗುಡ್ಡಗಾಡು ಓಟದ ತಯಾರಿಗೂ ಬಂದ್ ಬಾಧಿಸಿದೆ. ರಾತ್ರಿ ವೇಳೆ ಕೆಲವು ತರಕಾರಿ ಅಂಗಡಿಗಳು ಗ್ರಾಹಕರಿಗೆ ಅನುಕೂಲವಾಗುವಂತೆ ತೆರೆದಿತ್ತು. ಎರಡನೇ ದಿನವೂ ಬಂದ್ ಆದ ಕಾರಣ ಅಗತ್ಯ ವಸ್ತುಗಳಿಲ್ಲದೆ ಜನರು ಪರದಾಡುವಂತಾಯಿತು

By suddi9

Leave a Reply

Your email address will not be published. Required fields are marked *