ಮೂಡುಬಿದರೆ: ಮಂಗಳೂರು-ಮೂಡುಬಿದರೆ ರಾಷ್ಟ್ರೀಯ ಹೆದ್ದಾರಿಯ ಗಾಂಧಿನಗರ ಎಂಬಲ್ಲಿ ಗುರುವಾರ ಸಂಜೆ ಕಾಲೇಜು ಬಸ್ಸಿನ ಹಿಂಬದಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಂಬೀರವಾಗಿ ಗಾಯಗೊಂಡಿದ್ದಾರೆ.
Gandhinagara Accident (8)

Gandhinagara Accident (1)

Gandhinagara Accident (3)

Gandhinagara Accident (4)

Gandhinagara Accident (5)

Gandhinagara Accident (7)
ಮೂಡುಬಿದಿರೆ ಪೇಟೆ ಕಡೆಯಿಂದ ವಿದ್ಯಾಗಿರಿಯತ್ತ ಹೋಗುತ್ತಿದ್ದ ಆಳ್ವಾಸ್ ಕಾಲೇಜಿನ ಬಸ್ ಗಾಂಧಿನಗರದಲ್ಲಿ ಬ್ಯಾರಿಕೇಡ್ ಅಳವಡಿಸಿದ ಪ್ರದೇಶದಲ್ಲಿ ನಿಧಾನಗತಿಯಲ್ಲಿ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಪೇಟೆ ಕಡೆಯಿಂದಲೇ ಅತೀ ವೇಗದಿಂದ ಬಂದ ಕಾರು ಬಸ್ಸ್ನ ಹಿಂಬಂದಿಗೆ ಡಿಕ್ಕಿಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಬಸ್ಸಿನ ಹಿಂಭಾಗದಲ್ಲಿ ಸಿಲುಕಿತ್ತು. ಕಾರಿನಲ್ಲಿದ್ದ ಇಬ್ಬರು ಮೂಡುಬಿದಿರೆಯ ಬಾರ್ ಒಂದರಲ್ಲಿ ಮದ್ಯಸೇವನೆ ಮಾಡಿ, ಅಲ್ಲಿ ಹಣ ಕೊಡದೆ ಪೇಟೆ ಕಡೆಯಿಂದ ರಭಸವಾಗಿ ಕಾರಿನಲ್ಲಿ ಬಂದಿದ್ದಾರೆ ಎಂದು ಹೇಳಲಾಗಿದೆ. ಗಾಯಾಗೊಂಡ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿವರ ಇನ್ನಷ್ಟೇ ತಿಳಿಯಬೇಕಾಗಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

By Suddi9

Leave a Reply

Your email address will not be published. Required fields are marked *