ಮೂಡಬಿದರೆ: ಹದಿಮೂರನೇ ಹಣಕಾಸು ಯೋಜನೆಯಲ್ಲಿ ಪುರಸಭೆಯು ನವೀಕರಿಸಿದ ಜ್ಯೋತಿನಗರದ ಗಾಂಧೀ ಪಾರ್ಕ್ ಉದ್ಘಾಟನಾ ಸಮಾರಂಭ ಗಾಂಧೀ ಜಯಂತಿಂ ಜಯಂತಿಯಂದು ಮುಂಜಾನೆ 10 ಗಂಟೆಗೆ ನಡೆಯಬೇಕಿತ್ತು. ಆದರೆ ಪುರಸಭೆಯವರು ಉದ್ಘಾಟನೆಯನ್ನು `ಕೈ’ಬಿಟ್ಟು, ಮೌನವಾದ ಕಾರಣ ಪಾರ್ಕ್‍ನಲ್ಲಿ ನೀರವ ಮೌನ ಕಾಡಿತ್ತು.

ಸಚಿವ ಕೆ. ಅಭಯಚಂದ್ರ, ಅಧ್ಯಕ್ಷತೆ ವಹಿಸಲಿದ್ದ ಪುರಸಭಾಧ್ಯಕ್ಷೆ ರೂಪಾ ಎಸ್. ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ, ವಾರ್ಡ್ ಸದಸ್ಯ, ಮುಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮುಖ್ಯಾಧಿಕಾರಿ ಶೀನ ನಾಯ್ಕ್ ಇವರ ಹೆಸರು ಹೊತ್ತ ಉದ್ಘಾಟನಾ ಶಿಲಾಫಲಕವನ್ನು ಸುವ್ಯವಸ್ಥಿತವಾಗಿ ಸ್ಥಾಪಿಸಲಾಗಿದೆ. ಸ್ಥಳ, ದಿನಾಂಕ, ಸಮಯ ಎಲ್ಲವೂ ಸರಿಯಾಗಿಯೇ ಕಾಣಿಸುತ್ತಲಿದೆ. ಈ ಕುರಿತು ಮಾಹಿತಿಯನ್ನು ಎರಡು ದಿನ ಮುಂಚೆಯೇ ಪತ್ರಕರ್ತರಿಗೆ ಪತ್ರಮುಖೇನ ನೀಡಲಾಗಿದೆ. ನಿಗಧಿತ ಸಮಯಕ್ಕೆ ಪಾರ್ಕ್ ಹೋದಾಗ ಪತ್ರಕರ್ತರ ವಿನಃ ಬೇರಾರೂ ಇರಲಿಲ್ಲ. ಮಾಧ್ಯಮ ಪತ್ರಿನಿಧಿಗಳು ಪುರಸಭೆಯ ವಿಚಾರಣಾ/ದೂರು ವಿಭಾಗವನ್ನು ವಿಚಾರಿಸಿದಾಗ `ನಮಗೆ ಗೊತ್ತಿಲ್ಲ, ಇದು ಕಂಪ್ಲೇಂಟ್ ಸೆಕ್ಷನ್ ಎಂಬ ಉತ್ತರ ಬಂದಿದೆ.
