ಮುಂಬಯಿ: ರೈಲ್ವೇ ಪ್ರಯಾಣಿಕರ ಅನುಕೂಲತೆಗಳಿಗಾಗಿ ನಮ್ಮ ಸಂಘದ ಅವಿರತ ಪ್ರಯತ್ನಗಳು ಫಲಪ್ರದವಾಗಿವೆ. ಕೊಂಕಣ್ ರೈಲ್ವೇ ಹಳಿಯಲ್ಲಿ 1988ರಲ್ಲಿ ಅಸ್ತಿತ್ವಕ್ಕೆ ಬಂದ ನೇತ್ರಾವತಿ-ಕೊಚ್ಚಿ-ಕುರ್ಲಾ ರೈಲು(ತಿರುವಂತಪುರ-ಕುರ್ಲಾ), ಅಂತೆಯೇ ಮಂಗಳೂರು ಕುರ್ಲಾ ಮತ್ಸಗಂಧ ಎಕ್ಸ್‍ಪ್ರೆಸ್ ರೈಲುಯಾನಗಳ ಕಾಳಜಿ ಪ್ರಯಾಣಿಕರ ಅನುಕೂಲತೆಗೆ ಪೂರಕವಾಗಿದೆ. ನಮ್ಮ ಈಗಿನ ಅನೇಕ ಪ್ರಯತ್ನಗಳು ಮುಂದುವರಿದಿದ್ದು ಆ ಪಯ್ಕಿ ಬಾಂದ್ರಾ ವಸಾಯಿ ರೋಡ್ ಮಂಗಳೂರು ರೈಲಿನ ಬೇಡಿಕೆ ಮುಂದುವರಿದಿದೆ. ತಂಜಾವೂರು ದೇವಸ್ಥಾನ ಮತ್ತು ವೆಲಂಕಣಿ ಚರ್ಚಿಗೆ ಒಂದು ರೈಲನ್ನು, ಸಿಎಸ್‍ಟಿ ಮಂಗಳೂರು ಸೂಪರ್ ಪಾಸ್ಟ್ ರೈಲಿಗೆ ದಾದರ್‍ನಲ್ಲಿ ನಿಲುಗಡೆ, ಬೆಂಗಳೂರು-ಮಂಗಳೂರು ಹಗಲು ರೈಲು, ಕೊಂಕಣ್ ರೈಲ್ವೇ ವೇಳಾ ಪಟ್ಟಿ ಇತ್ಯಾದಿಗಳ ಬಗ್ಗೆ ಕಾರ್ಯನಿರ್ವಾಹಿಸುತ್ತಿದೆ. ಭವಿಷ್ಯತ್ತಿನಲ್ಲಿ ಇಲ್ಲಿನ ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ವಿಶ್ವಾಸಕ್ಕೆ ಪಡೆದು ನಾವೆಲ್ಲರೂ ಒಗ್ಗೂಡಿ ರೈಲ್ವೇ ಯಾತ್ರಿಗಳ ಅನುಕೂಲತೆಗೆ ಶ್ರಮಿಸೋಣ ಎಂದು ರೈಲ್ವೇ ಯಾತ್ರಿ ಸಂಘ (ರಿ.) ಉಡುಪಿ ಇದರ ಅಧ್ಯಕ್ಷ ಆರ್.ಎಲ್ ಡಾಯಸ್ ತಿಳಿಸಿದರು. ಇಂದಿಲ್ಲಿ ಶುಕ್ರವಾರ ಸಂಜೆ ಮಲಾಡ್ ಪಶ್ಚಿಮದ ಮಾರ್ವೆರೋಡ್‍ನ ದೀಪಮಾಲಾ ಸೊಸೈಟಿ ಸಭಾಗೃಹದಲ್ಲಿ ಮಲಾಡ್ ಕನ್ನಡ ಸಂಘದ ಸಹಯೋಗದೊಂದಿಗೆ ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯು ಆಯೋಜಿಸಿದ್ದರೈಲ್ವೇ ಯಾತ್ರಿ ಸಂಘದ ಅದಾಲತ್‍ನ್ನು ಉದ್ದೇಶಿಸಿ ಡಾಯಸ್ ಮಾತನಾಡಿದರು. ರೈಲ್ವೇ ಸಂಘದ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಅದಾಲತ್‍ನಲ್ಲಿ ಸಭೆಯ ಸಂಯೋಜಕರಾದ ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಹರೀಶ್ ಎನ್.ಶೆಟ್ಟಿದೀಪ ಬೆಳಗಿಸಿ ಉದ್ಘಾಟಿಸಿದರು ಹಾಗೂ ಉಪಸ್ಥಿತ ರೈಲ್ವೇ ಯಾತ್ರಿ ಸಂಘ ಉಡುಪಿ ಇದರ ಕಾರ್ಯದರ್ಶಿ ಪ್ರಭಾಕರ ಆಚಾರ್ಯ, ಕೋಶಾಧಿಕಾರಿ ರಾಮಚಂದ್ರ ಆಚಾರ್ಯ, ಜೋನ್ ರೆಬೆಲ್ಲೋ, ಮಧುಸೂಧನ್ ಹೆರೂರು ಮತ್ತಿತರರನ್ನು ರೈಲ್ವೇ ಯಾತ್ರಿ ಸಂಘ ಮುಂಬಯಿ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ ಹಾಗೂ ಹರೀಶ್ ಎನ್.ಶೆಟ್ಟಿಪುಷ್ಪಗುಪ್ಚ ನೀಡಿ ಗೌರವಿಸಿದರು.
ಬೋರಿವಿಲಿ ಲೋಕಸಭಾ ಕ್ಷೇತ್ರದಸಂಸದ ಗೋಪಾಲ ಸಿ.ಶೆಟ್ಟಿ ಮಾರ್ಗದರ್ಶನದಲ್ಲಿನಾವು ಮುಂಬಯಿಗರು ಸಾಂಘಿಕವಾಗಿ ಮುಂಬಯಿಯಲ್ಲಿನ ಜನತೆಗಾಗಿ ರೈಲ್ವೇಯಾನದ ಸೌಲಭ್ಯಗಳಿಗಾಗಿ ಒಗ್ಗೂಡಿ ಹೋರಾಡುತ್ತಿದ್ದೇವೆ. ಮಹಾನಗರದಲ್ಲಿನ ಜನತೆ ನಮಗೆ ಬೆಂಬಲಿಸಿ ಪ್ರೋತ್ಸಹಿಸಿದ್ದಲ್ಲಿ ನಮ್ಮ ಯೋಜನೆಗಳು ಜಾರಿಯಾಗಲಿವೆ. ಆದುದರಿಂದ ತುಳು-ಕನ್ನಡಿಗರು ಬಹುಸಂಖ್ಯೆಯಲ್ಲಿ ನಮ್ಮನ್ನು ಬೆಂಬಲಿಸಬೇಕು ಎಂದು ವಿರಾರ್ ಶಂಕರ್ ಕರೆಯಿತ್ತರು.
Railway Yatri Sangha @ Malad-5

Railway Yatri Sangha @ Malad-6

Railway Yatri Sangha @ Malad-7

Railway Yatri Sangha @ Malad-8

Railway Yatri Sangha @ Malad-9

Railway Yatri Sangha @ Malad-A1

Railway Yatri Sangha @ Malad-A2

Railway Yatri Sangha @ Malad-A3

Railway Yatri Sangha @ Malad-A4

Railway Yatri Sangha @ Malad-BB
ಹರೀಶ್ ಎನ್.ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿ ನಮ್ಮಂತಹ ಅನೇಕ ಸಂಘ-ಸಂಸ್ಥೆಗಳು ಮುಂಬಯಿಯಲ್ಲಿ ಕಾರ್ಯನಿರೂಪಿಸುತ್ತಿವೆ. ಅವುಗಳ ಪ್ರತಿನಿಧಿಗಳು ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಸಂಸ್ಥೆಯ ಬೆಂಬಲಕ್ಕೆ ನಿಲ್ಲಬೇಕು. ರೈಲು ಸೌಕರ್ಯಗಳಿಗೆ ಹೋರಾಟ ನಡೆಸುವಾಗ ತಮ್ಮ ಸಹಯೋಗವನ್ನಿತ್ತು ಸಹಕರಿಸಿದರೆ ಎಲ್ಲರ ಬೇದಿಕೆಗಳು ಸುಲಲಿತವಾಗಿ ಜಾರಿಯಾಗುವುದು ಎಂದರು. ನಮ್ಮದು ಸಾಂಘಿಕವಾದ ಹೋರಾಟವಾಗಿದೆ. ಮಹಾನಗರದ ಪಶ್ಚಿಮ ಪ್ರದೇಶದ ಜನತೆಯ ರೈಲುಯಾನವನ್ನು ಮನವರಿಸಿ ನಾವು ಸಂಘಟಿತರಾಗಿ ಹೋರಾಟಕ್ಕೆ ಇಳಿದಿದ್ದೇವೆ. ಅತ್ಯಾಧುನಿಕ ನೂತನ ರೈಲು ಸೇವೆಗಳ ಹೋರಾಟಕ್ಕೆ ನಾನು ಶ್ರಮಿಸುತ್ತಿದ್ದು, ತವರೂರ ರೈಲು ಪ್ರಯಾಣಕ್ಕಾಗಿ ಸಂಘಸಂಸ್ಥೆಗಳ ಬೆಂಬಲ ಅತ್ಯವಶ್ಯವಾಗಿದೆ. ದಿನನಿತ್ಯ ಸಾವಿರಾರು ಜನರು ರೈಲುಗಳಲ್ಲಿ ಸಂಕಷ್ಟವನ್ನು ಎದುರಿಸಿ ಪ್ರಯಾಣ ಮಾಡುತ್ತಿದ್ದರೂ ಹೋರಾಟಕ್ಕಿಳಿಯುವ ಸಂಸ್ಥೆಗಳಿಗೆ ಸಹಕರಿಸದಿರುವುದು ನಮ್ಮ ದೌರ್ಭಾಗ್ಯ. ಇನ್ನಾದರೂ ತಮ್ಮೆಲ್ಲರ ಸಹಯೋಗವನ್ನೀಡಿ ನಮ್ಮ ಹೋರಾಟಕ್ಕೆ ಜಯ ಸಿಗುವಲ್ಲಿ ನರವಾಗಿರಿ ಎಂದು ಶಿಮಂತೂರು ಉದಯ ಶೆಟ್ಟಿ ತಿಳಿಸಿದರು. ಮಲಾಡ್ ಕನ್ನಡ ಸಂಘದ ಉಪಾಧ್ಯಕ್ಷ ನ್ಯಾಯವಾದಿ ಜಗದೀಶ್ ಹೆಗ್ಡೆ, ಜಯ ಶೆಟ್ಟಿ ಚಾರ್ಕೋಪ್, ನ್ಯಾಯವಾದಿ ಎಸ್.ಬಿ ಅಮೀನ್, ಪೇಟೆಮನೆ ಪ್ರಕಾಶ್ ಶೆಟ್ಟಿತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ರೈಲ್ವೇ ಯಾತ್ರಿ ಸಂಘ ಮುಂಬಯಿ ಸಲಹಾದಾರ ಉಪಾಧ್ಯಕ್ಷ ಪ್ರೇಮನಾಥ ಕೋಟ್ಯಾನ್, ಜೊತೆ ಕಾರ್ಯದರ್ಶಿ ರಜಿತ್ ಸುವರ್ಣ, ಮಲಾಡ್ ಕನ್ನಡ ಸಂಘದ ಕೋಶಾಧಿಕಾರಿ ಪ್ರಕಾಶ್ ಎಸ್.ಶೆಟ್ಟಿ, ಜತೆ ಕಾರ್ಯದರ್ಶಿ ಅನಿಲ್ ಎಸ್.ಪೂಜಾರಿ, ಜೊತೆ ಕೋಶಾಧಿಕಾರಿ ಶಂಕರ್ ಆರ್.ಶೆಟ್ಟಿ, ಹಾಗೂ ಬಾಲಕೃಷ್ಣ ಶೆಟ್ಟಿ ವರಪಾಡಿ, ರವಿರಾಜ್ಕೆ .ಕಲ್ಯಾಣ್ಫುರ್, ತೋನ್ಸೆ ಸಂಜೀವ ಪೂಜಾರಿ, ಭಾಸ್ಕರ ವಿ.ಬಂಗೇರ, ಗೋಪಾಲ್ ಕಲ್ಯಾಣ್ಫುರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸುಜತಾ ತುಳಸೀದಾಸ್ ಅಮೀನ್ ಪ್ರಾರ್ಥನೆಗೈದರು. ಹರೀಶ್ ಎನ್.ಶೆಟ್ಟಿಸ್ವಾಗತಿಸಿದರು. ರೈಲ್ವೇ ಯಾತ್ರಿ ಸಂಘ ಮುಂಬಯಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶೀಲಾ ಶೆಟ್ಟಿ ಮತ್ತು ಮಲಾಡ್ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ಡಿ.ಪೂಜಾರಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.

By suddi9

Leave a Reply

Your email address will not be published. Required fields are marked *