ವಿಭಕ್ತ ಕುಟುಂಬ ಪದ್ದತಿಯಲ್ಲಿ ಮಕ್ಕಳಿಗೆ ಗುರುಹಿರಿಯರ ಜೊತೆ ಒಡನಾಟ ಕಡಿಮೆಯಾಗಿ ಸಂಸ್ಕಾರ ದೊರೆಯುತ್ತಿಲ್ಲ – ಹಿರಿಯ ನ್ಯಾಯಾದೀಶ ಚಂದ್ರಶೇಖರ ಯು.
ಬಂಟ್ವಾಳ: ಕೂಡು ಕುಟುಂಬದ ಅವಿಭಕ್ತ ಪದ್ದತಿಯಲ್ಲಿ ಪ್ರತಿಯೊಂದು ಕೆಲಸ ಕಾರ್ಯ ನಡೆಸುವಾಗ ಹಿರಿಯರ ಸಲಹೆ ಮತ್ತು ಆಶೀರ್ವಾದ ಪಡೆಯುವ ಮೂಲಕ ಯಶಸ್ವಿಯಾಗಿ ಮುನ್ನಡೆಯುತ್ತಿತ್ತು. ಪ್ರಸ್ತುತ ವಿಭಕ್ತ ಕುಟುಂಬ ಪದ್ದತಿಯಲ್ಲಿ ಮಕ್ಕಳಿಗೆ ಗುರುಹಿರಿಯರ ಜೊತೆ ಒಡನಾಟ ಕಡಿಮೆಯಾಗಿ ಸಂಸ್ಕಾರ ದೊರೆಯುತ್ತಿಲ್ಲ ಎಂದು ಬಂಟ್ವಾಳ ಜೆಎಂಎಫ್‍ಸಿ ಹಿರಿಯ ನ್ಯಾಯಾದೀಶ ಚಂದ್ರಶೇಖರ ಯು. ಹೇಳಿದರು.
KAR_0252

KAR_0276ಅವರು ಅ.1ರಂದು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಕಂದಾಯ ಇಲಾಖೆ ಆಶ್ರಯದಲ್ಲಿ ಬಿ.ಸಿ.ರೋಡಿನಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಕಾನೂನು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೆಲವೊಂದು ಸಂಕೀರ್ಣ ವಿಷಯಗಳಿಗೂ ದಂಪತಿಗಳ ನಡುವೆ ಪರಸ್ಪರ ವೈಮನಸ್ಸು ಉಂಟಾಗಿ ನ್ಯಾಯಾಲಯಗಳ ಮೂಲಕ ವಿಚ್ಚೇದನ ಪ್ರವೃತ್ತಿ ಹೆಚ್ಚಾಗುತ್ತಿದೆ. ಮಕ್ಕಳಿಗೆ ಬಾಲ್ಯದಲ್ಲಿ ಕನ್ನಡ ಮತ್ತು ಆಂಗ್ಲ ಮಾದ್ಯಮ ಎಂಬ ತಾರತಮ್ಯ ಇಲ್ಲದ ಶಿಕ್ಷಣ ದೊರೆತು ಹಿರಿಯರೊಂದಿಗೆ ಸಂಸ್ಕಾರಯುತ ಒಡನಾಟ ಸಿಗಬೇಕು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ವಹಿಸಿದ್ದರು. ಅವರು ಮಾತನಾಡಿ ಹಿರಿಯ ನಾಗರಿಕರ ಹಿತರಕ್ಷಣೆಗಾಗಿ ಸರಕಾರವು ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ. ಈ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದ ಅವರು ಎಲ್ಲಕ್ಕಿಂತ ಮುಖ್ಯವಾಗಿ ಹಿರಿಯ ನಾಗರಿಕರಿಗೆ ಪ್ರತೀ ಮನೆಯಲ್ಲಿ ಪ್ರೀತಿ ವಿಶ್ವಾಸ ಗೌರವ ಸಿಗಬೇಕು ಎಂದು ಕರೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾದೀಶ ದೇವಾನಂದ, ಹೆಚ್ಚುವರಿ ಸಿವಿಲ್ ನ್ಯಾಯಾದೀಶ ಆರ್.ಮಹೇಶ, ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಸರಕಾರಿ ವಕೀಲ ಎಂ.ಎಸ್.ಆಲಿ, ಸಮಾಜ ಕಲ್ಯಾಣ ಅ„ಕಾರಿ ಎಂ. ಕಾಶಿ, ವಕೀಲರ ಸಂಘದ ಉಪಾಧ್ಯಕ್ಷ ರಿಚರ್ಡ್ ಕ್ರಾಸ್ತ ಮತ್ತು ಇತರರು ಶುಭ ಹಾರೈಸಿದರು.
ಇದೇ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ. ಶ್ಯಾಮರಾಯ ಆಚಾರ್ಯ, ನಿವೃತ್ತ ಸೇನಾನಿ ಶ್ರೀನಿವಾಸ ಶೆಟ್ಟಿ, ಹಿರಿಯ ನ್ಯಾಯವಾದಿ ಅಜಿತ್ ಕುಮಾರ್ ರಾವ್ ಅಡ್ಡೂರು, ನಿವೃತ್ತ ಕಂದಾಯ ಅ„ಕಾರಿ ಬಿ. ತಮ್ಮಯ ಅವರನ್ನು ಸಮ್ಮಾನಿಸಲಾಯಿತು.
ಅಪರ ಸರಕಾರಿ ವಕೀಲ ಸತೀಶ್ ಕುಮಾರ್ ಶಿವಗಿರಿ ಸ್ವಾಗತಿಸಿದರು. ಉಪ ತಹಶೀಲ್ದಾರ್ ಪರಮೇಶ್ವರ ಮೊೈಲಿ ವಂದಿಸಿದರು. ನ್ಯಾಯವಾದಿ ಶಿವಪ್ರಕಾಶ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *