ಬಂಟ್ವಾಳ: ನೇತ್ರಾವತಿ ನದಿ ತಿರುವು ಯೋಜನೆ ವಿರೋ„ಸಿ ಗ್ರಾಮ ಮಟ್ಟದಲ್ಲಿ ನಿರಂತರ ಹೋರಾಟ ಸಂಘಟಿಸಲು ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ಬಿ.ಸಿ.ರೋಡ್ ಆಶ್ರಯದಲ್ಲಿ ಸೆ. 29ರಂದು ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಅಲ್ಲಿಪಾದೆ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ನಿರ್ಣಯಿಸಿದೆ.
ಮೊದಲ ಹಂತದ ಹೋರಾಟವನ್ನು ಅ. 3ರಂದು ಬೆಳಿಗ್ಗೆ 10ಗಂಟಗೆ ಬಂಟ್ವಾಳ ಪುರಸಭೆ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸುವುದಾಗಿ ಹೇಳಿದ್ದಾರೆ. ಪ್ರತೀ ಗ್ರಾಮ ಮಟ್ಟದಲ್ಲಿ ಹೋರಾಟ ಸಂಘಟಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ಜಿಲ್ಲೆಯ ಜನ ಪ್ರತಿನಿ„ಗಳು, ಸ್ಥಳೀಯ ಪತ್ರಿಕೆಯಲ್ಲಿ, ದ್ರಶ್ಯಮಾದ್ಯಮದಲ್ಲಿ ಹೋರಾಟಗಾರಿಗೆ ಬೆಂಬಲದ ಹೇಳಿಕೆ ನೀಡುವ ಬದಲು ಸದನದಲ್ಲಿ ಎತ್ತಿನ ಹೊಳೆ ವಿರುದ್ದ ಜನತೆಯ ಪರವಾಗಿ ಧ್ವನಿ ಎತ್ತುವಂತೆ ಒತ್ತಾಯಿಸಿದ್ದಾರೆ.
ಎಂಆರ್‍ಪಿಎಲ್ ನೇತ್ರಾವತಿ ನದಿಯ ಬಹುಪಾಲು ನೀರನ್ನು ಉಪಯೋಗಿಸುತ್ತಿದೆ. ಆದರೆ ನದಿ ತಿರುವು ಯೋಜನೆ ವಿರುದ್ದ ಚಕಾರ ಎತ್ತದಿರುವುದು ತೀರಾ ಖಂಡನೀಯ ಎಂದಿದ್ದಾರೆ.
ಸಭೆಯಲ್ಲಿ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಎಂ.ಪ್ರಭಾಕರ, ಕಾರ್ಯದರ್ಶಿ ರಾಮಚಂದ್ರ ಸುವರ್ಣ ಕಾಯೆರ್‍ಮಾರ್, ಪಿ.ಎ.ರಹೀಂ, ರಾಜ ಶಕ್ತಿಮೋಟಾರ್ಸ್, ಆಯೂಬ್ ಜಿ. ಕೆ. ಗೂಡಿನಬಳಿ, ಪದ್ಮನಾಭ ಮಯ್ಯ ಏಲಬೆ, ಇಬ್ರಾಹಿಂ ಕೈಲಾರ್, ಸೋಮಪ್ಪ ಕೋಟ್ಯಾನ್ ತುಂಬೆ, ಅಬ್ದುಲ್ ರಝಾಕ್ ಗುಂಪಕಲ್ಲು, ಹರೀಶ್ ಪೆರಾಜೆ, ವಿಶ್ವನಾಥ ಗಣೇಶ್ ಟಯರ್ಸ್ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *