ಮೂಡುಬಿದರೆ: ದೇಶದಾದ್ಯಂತ ನಡೆಯುತ್ತಿರುವ ವೃಕ್ಷಾ ಆಂದೋಲನದಂಗವಾಗಿ ಮೂಡುಬಿದರೆ ಎಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಆಲಂಗಾರಿನ ಪಂಡಿತ್ ರೆಸಾರ್ಟ್ ಆವರಣದಲ್ಲಿ ಶನಿವಾರ ವನ ಮಹೋತ್ಸವ ನಡೆಯಿತು.ಮೂಡುಬಿದರೆ ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ್ ಗಿಡಗಳನ್ನು ನೆಡುವ ಮೂಲಕ ಚಾಲನೆಯನ್ನು ನೀಡಿದರು. ಮೂಡುಬಿದರೆಯ ಉಪ ವಲಯಾರಣ್ಯಾಧಿಕಾರಿ ಪ್ರಶಾಂತ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

 

mbd_sep21_7

 

 

ಎಕ್ಸಿಸ್ ಬ್ಯಾಂಕ್‍ನ ಮೂಡುಬಿದರೆ ಬ್ರಾಂಚ್‍ನ ಮೆನೇಜರ್ ಗಣೇಶ್ ಭಟ್ ಮಾತನಾಡಿ ವೃಕ್ಷಾ ಆಂದೋಲನದಂಗವಾಗಿ ಇಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು ಸಹಕಾರ ನೀಡಿದ ಪಂಡಿತ್ ರೆಸಾರ್ಟ್‍ನವರಿಗೆ ಬ್ಯಾಂಕ್‍ನ ಪ್ರಶಂಸಾಪತ್ರವನ್ನು ಹಸ್ತಾಂತರಿಸಿದರು.
ಪಂಡಿತ್ ರೆಸಾರ್ಟ್‍ನ ಲಾಲ್ ಗೋಯೆಲ್, ಉದ್ಯಮಿಗಳಾದ ಕಮಲ್‍ಜೀತ್ ಸಿಂಗ್, ಅನಂತ್‍ರಾಮ್, ರಾಮ್‍ಪ್ರಸಾದ್ ಭಟ್, ರಜನಿ ಗೋಯೆಲ್ ಉಪಸ್ಥಿತರಿದ್ದರು. ರೂಬಿ ಅಗರ್‍ವಾಲ್ ಸ್ವಾಗತಿಸಿದರು. ರೀಟಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *