ಮೂಡುಬಿದರೆ: ನವೆಂಬರ್ 26ರಿಂದ 29ರವರೆಗೆ ನಡೆಯಲಿರುವ ಆಳ್ವಾಸ್ ನುಡಿಸಿರಿ-2015 ಸಮ್ಮೇಳನದಲ್ಲಿ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಕಾಯ್ದಿರಿಸಬಹುದಾಗಿದೆ.
ಸಮ್ಮೇಳನದ ಮಳಿಗೆಗಳಲ್ಲಿ ಪುಸ್ತಕ, ಕರಕುಶಲ ವಸ್ತುಗಳು, ದೇಶೀ ಉತ್ಪನ್ನಗಳು ಹಾಗೂ ದೇಶೀ ಉಪಹಾರಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ.

download

ಮಳಿಗೆಯೊಂದಕ್ಕೆ ರೂ.500 ನ್ನು ಶುಲ್ಕವಾಗಿ ಮುಂಗಡ ಪಾವತಿಸುವ ಮೂಲಕ ಮಳಿಗೆಯನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಒಂದಕ್ಕಿಂತ ಹೆಚ್ಚು ಮಳಿಗೆಗಳನ್ನು ಪಡೆಯಲು ಅವಕಾಶವಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗಳನ್ನು ತೆರೆಯುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *