ಬಂಟ್ವಾಳ: ಕಾಂಗ್ರೆಸ್ನ ದುರಾಡಳಿತದಿಂದ ಬೇಸತ್ತು ಮತ್ತು ಕೇಂದ್ರದಲ್ಲಿ ಮೋದಿಯವರ ಆಡಳಿತ ಮೇಲೆ ವಿಶ್ವಾಸವಿರಿಸಿ ಜನತೆ ಬಿಜೆಪಿ ಮೇಲೆ ಆಶೀರ್ವಾದ ಮಾಡಿದ್ದಾರೆ.ಭ್ರಷ್ಟಾಚಾರ ರಹಿತ ಆದರ್ಶದ ಆಡಳಿತದಿಂದ ಗ್ರಾಮ ಪಂಚಾಯತ್ನ್ನು ಸ್ವರ್ಣಗ್ರಾಮವನ್ನಾಗಿಸಬೇಕು ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ಅವರು ರವಿವಾರ ಬಂಟ್ವಾಳ ತಾಲೂಕು ಉಳಿ ಗ್ರಾಮ ಸಮಿತಿ ವತಿಯಿಂದ ಕಕ್ಯಬೀಡು ಶ್ರೀ ಪಂಚದುರ್ಗಾ ಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ಜರಗಿದ ಮತದಾರರಿಗೆ, ಬಿಜೆಪಿ ಕಾರ್ಯಕರ್ತರ ಬೃಹತ್ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
2009pkt1
ಜನಧನ್,ಪ್ರಧಾನಮಂತ್ರಿ ಪಿಂಚಣಿಯೋಜನೆ,ಜೀವವಿಮಾ ಯೋಜನೆ,ಮುದ್ರಾ ಬ್ಯಾಂಕ್ಯೋಜನೆ ದೀನದಯಾಳ್ ಸ್ಕಿಲ್ ಡೆವಲಪ್ಮೆಂಟ್ ಯೋಜನೆ ಗ್ರಾಮ ವಿಕಾಸ ಯೋಜನೆ,ಸ್ಮಾರ್ಟ್ ಸಿಟಿ ಮೊದಲಾದ ಅದ್ಭುತ ಯೋಜನೆಗಳಿಂದ ಮೋದಿ ಸರಕಾರ ಜನಮೆಚ್ಚುಗೆ ಗಳಿಸಿದೆ.ಇತರ ರಾಜ್ಯಗಳಲ್ಲಿ ಬಿಜೆಪಿ ವಿಜಯ ಗಳಿಸಿದಂತೆ ಮುಂದಕ್ಕೆ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಲಿದೆ ಎಂದು ಅವರು ಹೇಳಿದರು.
ಬಿಜೆಪಿ ನಾಯಕ,ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಹುವರ್ಷಗಳ ಬಳಿಕ ಬಿಜೆಪಿ ಅಭಿಮಾನಿಗಳಿಂದ ಪಂಚಾಯತ್ ಆಡಳಿತ ಅಧಿಕಾರ ಗಳಿಸಿದೆ. ಸದಸ್ಯರು ಮತ್ತು ಕಾರ್ಯಕರ್ತರು ನಿತ್ಯ ಸಂಪರ್ಕದೊಂದಿಗೆ ಜನರ ಕಷ್ಟಸುಖಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳಿಂದ ಆಡಳಿತ ಉಳಿಸಿ ಗ್ರಾಮದಲ್ಲಿ ಬಿಜೆಪಿ ಏಕೈಕ ಪಕ್ಷದ ಗುರಿಯ ಸಂಕಲ್ಪ ತೊಡಬೇಕು ಎಂದು ಹೇಳಿದರು.ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ ಅವರು ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ಮೂಲಭೂತ ಸೌಲಭ್ಯಗಳನ್ನೊದಗಿಸುವ ವಿವಿಧ ಜನಪರ ಯೋಜನೆಗಳನ್ನು ಹಮ್ಮಿಕೊಂಡು ಮಾದರಿ ಗ್ರಾಮವೆಂದು ಗ್ರಾಮಸ್ಥರಿಂದ ಗೌರವ ಗಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದು ಕಾರ್ಯಕರ್ತರು,ಚುನಾಯಿತ ಸದಸ್ಯರ ಜವಾಬ್ದಾರಿಯಾಗಿದೆ ಎಂದರು .ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಅವರು ಅಭಿನಂದನಾ ಭಾಷಣ ಮಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ವಿವಿಧ ಚಟುವಟಿಕೆಯಿಂದ ಜನಮನ ಗೆದ್ದು ಪ್ರಥಮ ಬಾರಿಗೆ ಬಿಜೆಪಿ ಆಡಳಿತ ದೊರಕಿಸಿಕೊಂಡಿದೆ.ಪ್ರಜ್ಞಾವಂತ ಜನತೆಗೆ ಅಭಿನಂದನೆಗಳು ಎಂದು ಹೇಳಿದರು .

ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ ಬಂಟ್ವಾಳ , ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ , ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ. ದೇವದಾಸ ಶೆಟ್ಟಿ , ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದಶರ್ಿ ರಾಮದಾಸ್ ಬಂಟ್ವಾಳ, , ಸರಪಾಡಿ ಜಿ.ಪಂ.ಸದಸ್ಯೆ ಗಿರಿಜ, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಕೆ. ಹರಿಶ್ಚಂದ್ರ ಪೂಜಾರಿ, ಬಾರ್ಯ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಪೈ, ಬಡಗಕಜೆಕಾರು ಗ್ರಾ.ಪಂ. ಅಧ್ಯಕ್ಷ ವಜ್ರ ಪೂಜಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಧನಂಜಯ ಶೆಟ್ಟಿ , ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ಗ್ರಾ.ಪಂ. ಉಳಿ ಅಧ್ಯಕ್ಷೆ ದೀನಾಕ್ಷಿ ಮಲ್ಯೋಡಿ, ಕಕ್ಯಬೀಡು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಉಳಿ ದಾಮೋದರ ನಾಯಕ್,ಗ್ರಾಮಸಮಿತಿ ಅಧ್ಯಕ್ಷ ಪದ್ಮನಾಭ ರೈ ಮಜಿಗುಡ್ಡೆ ,ಬಿಜೆಪಿ ಪ್ರಮುಖರಾದ ಜಗದೀಶ ಭಂಡಾರಿ,ಶಿವಪ್ಪ ಪೂಜಾರಿ ಜೇಡರಬೆಟ್ಟು,ಜಯಶೆಟ್ಟಿ ಕಿಂಜಾಲು,ಸಂಜೀವ ಪೂಜಾರಿ ಕೇರ್ಯ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸಮಿತಿ ವತಿಯಿಂದ ಸಮ್ಮಾನಿಸಲಾಯಿತು.ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು.ಇದೆ ವೇಳೆ ಅನಾರೋಗ್ಯದಿಂದ ಬಳಲುತ್ತಿರುವ ಬಳೆಂಜದ ಪುಟಾಣಿ ದಿತಿಯ ಚಿಕಿತ್ಸೆಗಾಗಿ 50 ಸಾವಿರ ರೂ.ಗಳನ್ನು ಸ್ಥಳದಲ್ಲಿ ನಿಧಿ ಸಂಗ್ರಹಿಸಲಾಯಿತು.
ಗ್ರಾ.ಪಂ.ಉಪಾಧ್ಯಕ್ಷ ಸುರೇಶ್ ಮೈರ,ಸದಸ್ಯರಾದ ಚಿದಾನಂದ ರೈ,ಚೇತನ್ ಉರ್ದೊಟ್ಟು,ರೇವತಿ ಮುದಲಾಡಿ,ಗುಲಾಬಿ ಮಾಡೋಡಿ,ಸಮಿತಿ ಪದಾಕಾರಿಗಳಾದ ಬಾಬು ಮಾಸ್ತರ್ಕೋಂಗುಜೆ,ರಂಜಿತ್ ಮೈರ,ಹರೀಶ್ ಕಕ್ಯ,ರೋಹಿನಾಥ್,ಸನತ್ ಕಕ್ಯ,ಪುರಂದರ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.
ವಸಂತ ಸಾಲ್ಯಾನ್ಅವರು ಸ್ವಾಗತಿಸಿದರು.ಪ್ರಾಕಾಶ್ ಕೆಳಗಿನ ಕರ್ಲ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *