ಬಂಟ್ವಾಳ ; ರಾಜ್ಯದಲ್ಲಿ ವಿದ್ಯುತ್ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಸೌರಶಕ್ತಿ ವಿದ್ಯುತ್ ಆಗಿ ಪರಿವರ್ತನೆಯಾಗಬೇಕಾದ ಅನಿವಾರ್ಯತೆಯೂ ಹೆಚ್ಚಿದೆ ಎಂದು ಮೆಸ್ಕಾಂನ ಆಡಳಿತ ನಿದೇಶಕರಾದ ಚಿಕ್ಕನಂಜಪ್ಪ ಹೇಳಿದ್ದಾರೆ.


ಬಂಟ್ವಾಳ ಎಸ್.ವಿ.ಎಸ್ ಕಾಲೇಜು ತಾಲೂಕಿನಲ್ಲೇ ಪ್ರಥಮ ಎಂಬಂತೆ ಕಾಲೇಜಿನಲ್ಲಿ ಅನುಷ್ಠಾನಗೊಳಿಸಿದ ಸೌರ ವಿದುತ್ ಸ್ಥಾವರವನ್ನು ಉದ್ಘಾಟಿಸಿ ಮಾತನಾಡಿದರು.
ಹೆಚ್ಚು ಹೆಚ್ಚು ವಿದ್ಯುತ್ ನ ಉತ್ಪಾದನೆ ಇಂದಿನ ಅಗತ್ಯವಾಗಿದ್ದು, ಸೌರಶಕ್ತಿಯನ್ನು ಬಳಸುವ ಮೂಲಕ ವಿದ್ಯುತ್ ಕೊರತೆ ನೀಗಿಸಬೇಕು ಎಂದ ಅವರು, ಎಸ್ವಿಎಸ್ ಕಾಲೇಜು ಈ ನಿಟ್ಟಿನಲ್ಲಿ ಮುಂದಾಗಿರುವುದು ಇತರ ಸಂಸ್ಥೆಗಳಿಗೂ ಮಾದರಿ ಎಂದರು.
ಓಆರ್ಬಿ ಎನಜರ್ಿ ಪ್ರೈ. ಲಿಮಿಟೆಡ್ನ ಜನರಲ್ ಮ್ಯಾನೇಜರ್ ಸುಧೀಂದ್ರ ಟಿ. ಅವರು ಮಾತನಾಡಿ, ಜಪಾನ್ ಹಾಗೂ ಇಸ್ರೇಲ್ ನಲ್ಲಿ ಶೇ 50 ರಷ್ಟು ಮನೆಗಳಲ್ಲಿ ಸೌರ ಶಕ್ತಿಯ ವಿದ್ಯುತ್ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಇದು ಅನಿವಾರ್ಯವಾಗಲಿದೆ ಎಂದರು. ಕಾಲೇಜಿನ ಸಂಚಾಲಕರಾದ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪಾಂಡುರಂಗ ನಾಯಕ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಪ್ರೊ.ತುಕಾರಾಮ ಪೂಜಾರಿ ವಂದಿಸಿದರು. ಉಪನ್ಯಾಸಕ ಕಿಟ್ಟು ರಾಮಕುಂಜ ಕಾರ್ಯಕ್ರಮ ನಿರ್ವಹಿಸಿದರು.
