ಬಂಟ್ವಾಳ: ಶಿಕ್ಷಣ, ಲೈಂಗಿಕ ರಕ್ಷಣೆ, ಆರ್ಥಿಕ ಸ್ವಾತಂತ್ರ್ಯ, ಮಾನಸಿಕ ಹಾಗೂ ದೈಹಿಕ ದೃಢತೆ ಹಾಗೂ ಸುಭದ್ರ ಕುಟುಂಬ ಸಾಮಾಥ್ರ್ಯ ಎಂಬ ಐದು ಮುತ್ತುಗಳಿಂದ ಮಹಿಳಾ ಸಬಲೀಕರಣ ಸಾಧ್ಯ. ಮಹಿಳಾ ಸಬಲೀಕರಣ ಮಹಿಳೆಯರಿಂದಲೇ ನಡೆಯಬೇಕು ಎಂದು ಮಂಗಳೂರು ಅಲೋಶಿಯಸ್ ಕಾಲೇಜಿನ ಸಹಾಯಕಿ ಪ್ರೋಫೆಸರ್ ಶ್ವೇತಾ ರಸ್ಕೀನ್ಹಾ ಹೇಳಿದರು.
ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಜಿಲ್ಲೆ317, ವಿಟ್ಲ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ವತಿಯಿಂದ ವಿಟ್ಲದ ಸರ್ಕಾರಿ ಶಾಲೆಯಲ್ಲಿ ಭಾನುವಾರ ನಡೆದ ಮಹಿಳಾ ಸಮಾವೇಶದಲ್ಲಿ ಮಹಿಳಾ ಸಬಲೀಕರಣ ವಿಷಯದಲ್ಲಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಮಹತ್ವ ಸ್ಥಾನಮಾನವಿದ್ದು, ಅದನ್ನು ಮಹಿಳೆಯರು ಪಡೆದಾಗ ನಮ್ಮ ವ್ಯಕ್ತಿತ್ವ ವಿಕಾಸನಕ್ಕೆ ಅದು ಧೈರ್ಯ ತುಂಬುತ್ತದೆ. ತಾಯಿ ಮಕ್ಕಳಿಗೆ ಮಾದರಿಯಾಗಿ ಅವರಿಗೆ ಮಾರ್ಗದರ್ಶನ ನೀಡಬೇಕು. ಕೌಶಲ್ಯಭರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನೆಸ್ 317ರ ಜಿಲ್ಲಾಧ್ಯಕ್ಷೆ ಅರುಣಾ ಸೋಮಶೇಖರ್ ಅವರು ದೇಶ ನಿರಂತರವಾಗಿ ಅಭಿವೃದ್ಧಿಯಾಗುತ್ತಲೇ ಇದೆ. ಆದರೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ, ಬಾಲಕಿಯರ ಮೇಲೆ ಅತ್ಯಾಚಾರ ಸಮಾಜಕ್ಕೆ ಒಂದು ಶಾಪ ಎಂಬಂತೆ ಪರಿಣಾಮಿಸಿದೆ ಎಂದರು. ಪುರುಷರಂತೆ ಮಹಿಳೆಯರಿಗೆ ಕೂಡಾ ಸಮಾನತೆ ದೊರೆಯಬೇಕು. ಮನೆಮನೆಯಿಂದಲೇ ಮಹಿಳೆಯರ ಸಬಲೀಕರಣದ ಕಾರ್ಯ ನಡೆಯಬೇಕು ಎಂದು ತಿಳಿಸಿದರು.
ವಿಟ್ಲ ಲಯನ್ಸ್ ಕ್ಲಬ್ನ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ದಾಮೋದರ ಬಿ.ಎಂ, ಪ್ರಾಂತ್ಯ ವಲಯಾಧ್ಯಕ್ಷ ಮಹಮ್ಮದ್ ಇಕ್ಬಾಲ್, ಲಯನೆಸ್ ಪ್ರಾಂತೀಯ ಅಧ್ಯಕ್ಷೆ ಸುಚಿತ್ರ ಎಸ್ ರಾವ್, ಲಯನೆಸ್ ಪ್ರಾಂತ್ಯ 1ರ ವಲಯಾಧ್ಯಕ್ಷೆ ಭಾರತಿ ಪುಷ್ಪರಾಜನ್, ಲಯನೆಸ್ ಅಧ್ಯಕ್ಷೆ ಲೀಲಾವತಿ, ಲಯನೆಸ್ ಕಾರ್ಯದರ್ಶಿ ಯು ಕೃಷ್ಣಮೂರ್ತಿ, ಕೋಶಾಧಿಕಾರಿ ವಿನ್ನಿ ಮಸ್ಕರೇನಸ್, ಭಾರತಿ ಪಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಮೇಲ್ವಿಚಾರಕ ಜನಾರ್ದನ ವಿಟ್ಲ, ವಲಯಾಧ್ಯಕ್ಷ ರಮೇಶ್ ಪೂಜಾರಿ, ಬಂಟ್ವಾಳ ಲಯನ್ಸ್ ಅಧ್ಯಕ್ಷ ಜಯಂತ್ ಶೆಟ್ಟಿ, ಲಯನೆಸ್ ಅಧ್ಯಕ್ಷೆ ಗೀತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ ಲಯನ್ಸ್ ಅಧ್ಯಕ್ಷ ಸತೀಶ್ಕುಮಾರ್ ಆಳ್ವ ಸ್ವಾಗತಿಸಿದರು. ಮಹಿಳಾ ಸಬಲೀಕರಣ ಸಂಯೋಜಕಿ ಜೆಸಿಂತಾ ಮಸ್ಕರೇನಸ್ ಪ್ರಾಸ್ತವಿಕವಾಗಿ ಮಾತನಾಡಿದರು. ಲಯನೆಸ್ ಕಾರ್ಯದರ್ಶಿ ಲಕ್ಷ್ಮೀ ಬಿ.ಕೆ ಭಟ್ ಧನ್ಯವಾದ ಹೇಳಿದರು. ಉಮಾ ಬೆಹನ್, ಜಯಲಕ್ಷ್ಮೀ ಹಾಗೂ ಮಂಗೇಶ್ ಭಟ್ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಶಿಲ್ಪ ಹಾಗೂ ಪ್ರಿಯಾ ಪ್ರಾರ್ಥನೆ ಹಾಡಿದರು.
