ಪ್ರಥಮ ಪೂಜಿತ, ವಿಶ್ವ ವಂದಿತ, ವಿಘ್ನ ನಿವಾರಕ ಗಣಪತಿಯು ಪಾರ್ವತಿಯ ಪುತ್ರ. ಪಾರ್ವತಿಯು ಪರ್ವತ(ಗಿರಿ)ರಾಜನ ಪುತ್ರಿ. ಪೃಥ್ವಿಯು ಗುರುತ್ವಾಕರ್ಷಣ ಶಕ್ತಿಯನ್ನು ಹೊಂದಿರುವುದರಿಂದ ಆವೆಮಣ್ಣು ಅಥವಾ ಜೇಡಿಮಣ್ಣಿನಿಂದ ತಯಾರಿಸಿದ ಗಣಪತಿಯ ಮೂರ್ತಿಯು ಬ್ರಹ್ಮಾಂಡದಿಂದ ಗಣಪತಿಯ ಪವಿತ್ರಕ(ಸೂಕ್ಷ್ಮಾತಿಸೂಕ್ಷ್ಮಕಣ)ಗಳನ್ನು ಹೆಚ್ಚು ಪ್ರಮಾಣದಲ್ಲಿ ತನ್ನೆಡೆಗೆ ಸೆಳೆದುಕೊಳ್ಳುವುದು. ಗಣಪತಿಗೆ ಅರ್ಪಿಸುವ ಎಳೆ ಗರಿಕೆ(ದೂರ್ವೆ)ಯು ಸಹ ಗಣಪತಿಯ ಪವಿತ್ರಕಗಳನ್ನು ಆಕರ್ಷಿಸಿ ಬಹಳ ಹೊತ್ತು ಮೂರ್ತಿಯಲ್ಲಿ ಉಳಿಸಿಕೊಂಡು ಭಕ್ತರ ಕಡೆಗೂ ಪ್ರಕ್ಷೇಪಿಸುವುದು. ಗಣಪತಿ ಪೂಜೆಯಲ್ಲಿ ಬಳಸುವ ಕೆಂಪು ವಸ್ತ್ರ, ಕೆಂಪು ಹೂವು ಮತ್ತು ರಕ್ತಚಂದನ ಇವುಗಳು ಮೂರ್ತಿಯನ್ನು ಜಾಗೃತಗೊಳಿಸುವುವು. ವಿಸರ್ಜನೆಯ ಬಳಿಕ ಮೂರ್ತಿಯು ಸುಲಭವಾಗಿ ನೀರಲ್ಲಿ ಕರಗುವುದರಿಂದ ಆ ಜಲಾಶಯದ ನೀರನ್ನು ಉಪಯೋಗಿಸಿದವರಿಗೂ ಗಣಪತಿಯ ಚೈತನ್ಯದ ಲಾಭ ಸಿಗುವುದು. ಕಾಗದದ ಪಲ್ಪ್, ಪ್ಲಾಸ್ಟರ್ ಓಫ್ ಪ್ಯಾರಿಸ್ ಇತ್ಯಾದಿಗಳಿಂದ ತಯಾರಿಸಿದ ಮೂರ್ತಿಯಿಂದ ಈ ಪ್ರಯೋಜನ ದೊರೆಯಲಾರದು. ವರ್ಷಂಪ್ರತಿ ಗಣಪತಿ ಮೂರ್ತಿ ರಚನೆಗೆ ಒಂದು ಹಿಡಿಯಷ್ಟಾದರೂ ಹೆಚ್ಚು ಮಣ್ಣು ಬಳಸಬೇಕೆಂಬುದರ ಭಾವಾರ್ಥವು ವರ್ಷಂಪ್ರತಿ ಹೆಚ್ಚು ಮಣ್ಣನ್ನಲ್ಲ – ಬದಲಾಗಿ ಭಾವ ಭಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂಬುದೇ ಆಗಿದೆ. ಶ್ರೀ ಗಣೇಶ ಚತುರ್ತಿಯ ದಿನ ಭೂಮಿಗೆ ಬರುವ ಸಾವಿರ ಪಟ್ಟು ಚೈತನ್ಯವನ್ನು ಓಂ ಗಂ ಗಣಪತಯೇ ನಮಃ ಜಪಮಾಡುತ್ತಾ ಪಡೆದುಕೊಳ್ಳೋಣ. ವಕ್ರ(ಕೆಟ್ಟ) ನಡತೆಯುಳ್ಳವರನ್ನು ಅಂಕುಶದಿಂದ ಸೆಳೆದು, ಪಾಶದಿಂದ ಬಂಧಿಸಿ, ಶಿಕ್ಷಿಸಿ ಸರಳ ಮಾರ್ಗಕ್ಕೆ ತರುವ ವಕ್ರತುಂಡನು, ನಾಯಕನ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದ ವಿನಾಯಕನು, ಹದಿನೆಂಟು ವಿದ್ಯೆಗಳ ಅಧಿಪತಿಯಾದ ವಿದ್ಯಾಪತಿಯು ನಮ್ಮನ್ನು ಅನುಗ್ರಹಿಸಲಿ.
ಲಕ್ಷ್ಮೀ..
