ಮಹತ್ವದ ಬೆಳವಣಿಗೆಯೊಂದರಲ್ಲಿ ಎತ್ತಿನಹೊಳೆ-ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿದ ಕಾಂಗ್ರೆಸಿಗರಿಗೆ ಜಿಲ್ಲೆಯಲ್ಲಿ ಯಾವುದೇ ಮಹತ್ವದ ಹುದ್ದೆ ನೀಡದಂತೆ ನೋಡಿಕೊಳ್ಳಲಾಗಿದೆ ಎಂಬ ಸುದ್ದಿ ಈ ಕಿವಿಯಿಂದ ಆ ಕಿವಿಗೆ ಹರಿದಾಡುತ್ತಿದೆ.
ಎತ್ತಿನ ಹೊಳೆ ಯೋಜನೆಯ ರೂವಾರಿ ವೀರಪ್ಪ ಮೊಯ್ಲಿ ಈ ರೀತಿ ಮಾಡುವಂತೆ ಸೂಚಿಸಿದ್ದಾರೆನ್ನಲಾಗಿದೆ.
unnamed (3)
ಜನಾರ್ದನ ಪೂಜಾರಿ ಬೆಂಬಲಿಗರು ಎತ್ತಿನ ಹೊಳೆ ಯೋಜನೆಯ ವಿರೋಧಿಗಳಾಗಿದ್ದು, ಪೂಜಾರಿ ಬೆಂಬಲಿಗರಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್‍ನ ಪ್ರಮುಖರಿಗೆ ಯಾವುದೇ ಮಹತ್ವದ ಸ್ಥಾನ ನೀಡದಂತಯೆ ನೋಡಿಕೊಳ್ಳಲಾಗಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಆದ್ದರಿಂದ ಎತ್ತಿನ ಹೊಳೆ ಯೋಜನೆಯಿಂದಾಗಿ ಜಿಲ್ಲೆಯ ಕಾಂಗ್ರೆಸ್ ಮಧ್ಯೆ ಭಿಕ್ಕಟ್ಟು ಮೂಡಿದೆ ಎಂಬ ವರ್ತಮಾನ ಮಾಧ್ಯಮಕ್ಕೆ ಲಭಿಸಿದೆ.

By Suddi9

Leave a Reply

Your email address will not be published. Required fields are marked *