ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್‍ಕ್ರಾಸ್ ಘಟಕದ ವತಿಯಿಂದ ಕಾಲೇಜಿನ ಆವರಣದಲ್ಲಿ ಕಾಳು ಮೆಣಸು ಗಿಡಗಳನ್ನು ನೆಡಲಾಯಿತು. ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಧ್ಯಕ್ಷರಾದ ಶ್ರೀ ಸದಾಶಿವ ಬಂಗೇರ ಅವರು ಗಿಡಗಳನ್ನು ನೆಡುವ ಮೂಲಕ ಉದ್ಘಾಟಿಸಿದರು. ರೆಡ್‍ಕ್ರಾಸ್ ಘಟಕಾಧಿಕಾರಿ ರೊನಾಲ್ಡ್ ಪ್ರವೀಣ್ ಕೊರೆಯಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
Untitled-1 copy
ಪ್ರಾಂಶುಪಾಲ ಡಾ. ಗಿರೀಶ ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರೆಡ್‍ಕ್ರಾಸ್ ಚಟುವಟಿಕೆಗೋಸ್ಕರ ವಿದ್ಯಾರ್ಥಿಗಳಿಂದ ಹಾಗೂ ಬೋಧಕರಿಂದ ಹುಂಡಿ ಹಣ ಸಂಗ್ರಹಿಸಲಾಯಿತು. ಸಂಗ್ರಹಿಸಿದ ಮೊತ್ತವನ್ನು ರೊನಾಲ್ಡ್ ಪ್ರವೀಣ್ ಕೊರೆಯಾ ಹಾಗೂ ಘಟಕದ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.

By suddi9

Leave a Reply

Your email address will not be published. Required fields are marked *