ಮುಂಬಯಿ: ಏಸುಕ್ರಿಸ್ತರ ಜನನಿದಾತೆ ಮಾತೆ ಮರಿಯಮ್ಮರ ಜನ್ಮೋತ್ಸವ(ಸೆ.08) ಜಗತ್ತಿನಾದ್ಯಂತ ಸೇರಿದಂತೆ ದೇಶದ ಎಲ್ಲೆಡೆ ಆಚರಿಸಲ್ಪಡುತ್ತಿದ್ದು, ಮಹಾನಗರ ಮುಂಬಯಿಯಲ್ಲೂ ಕ್ರೈಸ್ತ ಜನತೆಯು
ನಗರದಾದ್ಯಂತದ ಅನೇಕ ಸಂಘ-ಸಂಸ್ಥೆಗಳ ಸಹಯೋಗ, ಚರ್ಚ್‍ಗಳಲ್ಲಿ `ಕನ್ಯಾಕುಮಾರಿ ಮಾತೆ’ ಜನ್ಮೋತ್ಸವ ಸಂಭ್ರಮಿಸಲಿದ್ದಾರೆ. ಮಾತೆಮರಿಯಮ್ಮರ ಹುಟ್ಟುಹಬ್ಬಕ್ಕೆ ಸಿದ್ಧತೆ ನಡೆಸಿ ಇಂದಿಲ್ಲಿ ದಿನವಿಡೀ ನಗರದ ಸ್ಥಳಿಯ ಇಗರ್ಜಿಗಳಲ್ಲಿ `ಕನ್ಯಾಕುಮಾರಿ ಮಾತೆಯ’ ಪ್ರತಿಮೆಯನ್ನು ಅಲಂಕರಿಸಿ ಪುಟಾಣಿಗಳು ಪುಷ್ಫಾರ್ಚನೆಗೈದು, ನೊವೆನಾ, ಸಂಭ್ರಮಿಕ ಪೂಜೆ ನೆರವೇರಿಸಿದರು. ಮಾತೆಯಲ್ಲಿನ ತಮ್ಮ ನಂಬಿಕೆಯ ಮತ್ತಷ್ಟು
ಆತ್ಮವಿಶ್ವಾಸ ಭರಿಸಲು ಬಾಂದ್ರಾ ಪಶ್ಚಿಮದ `ಮೌಂಟ್ ಮೇರಿ’, ಅಂಧೇರಿ ಪಶ್ಚಿಮ ಇಲ್ಲಿನ ಇರ್ಲಾದ ವೆಲಂಕಣಿ (ಆರೋಗ್ಯ ಮಾತೆ) ಮಾತೆಯ ಮಂದಿರ, ಮಾಹಿಮ್ ಪಶ್ಚಿಮದಲ್ಲಿನ ಸೈಂಟ್ ಮೈಕಲ್ಸ್
ಚರ್ಚ್‍ನ`ನಿತ್ಯಾಧರ್ ಮಾತೆ’ಯ ಇಗರ್ಜಿಗಳಿಗೆ ಭೇಟಿಯನ್ನಿತ್ತು ಮಾತೆಯನ್ನು ಆರಾಧಿಸಿದರು.

Irla Velankanni Church-1

Irla Velankanni Church-2

Irla Velankanni Church-3

Irla Velankanni Church-4

Irla Velankanni Church-5

Irla Velankanni Church-6

Irla Velankanni Church-7

Irla Velankanni Church-8

Irla Velankanni Church-9

Irla Velankanni Church-11

Irla Velankanni Church-13

Irla Velankanni Church-14

Irla Velankanni Church-16

Irla Velankanni Church-17

Irla Velankanni Church-18

Irla Velankanni Church-19

Irla Velankanni Church-20

Irla Velankanni Church-22

Irla Velankanni Church-23

Irla Velankanni Church-24

Irla Velankanni Church-26

Irla Velankanni Church-27

Irla Velankanni Church-29

Irla Velankanni Church-A2

Irla Velankanni Church-C1

ಈ ಕ್ಷೇತ್ರಗಳಲ್ಲಿ `ಮಾತೆ ಭಕ್ತರ ಸಹಾಯ’ಕ್ಕಾಗಿ ಬರುತ್ತಾರೆ ಎನ್ನುವುದು ಪ್ರತೀತವಿದ್ದು, ಪವಾಡ ಕ್ಷೇತ್ರಗಳೆಂಬ ವಿಶ್ವಾಸವಿರಿಸಿದ್ದ ಇರ್ಲಾದಲ್ಲಿನವೆಲಂಕಣಿ ಚರ್ಚ್‍ನಲ್ಲಿಆರಾಧಿಸುತ್ತಿರುವ ಮಾತೆ ಮರಿಯಮ್ಮರಿಗೆ ಇಂದು ಸಾವಿರಾರು ಭಕ್ತಾಧಿಗಳು ಪುಷ್ಪಾರ್ಚನೆನಡೆಸಿ ನಮಿಸಿದರು. ದೀನ ದಲಿತರ ನೆರವಿನ ಮಾತೆ ಎನ್ನುವ ಭರವಸೆಯಿರುವ ವೆಲಂಕಣಿ ಮಾತೆ ತಮ್ಮ ಪ್ರಭಾವ ಶಕ್ತಿಯನ್ನು ಉಳಿಸಿಕೊಂಡಿದ್ದು ಸರ್ವ ಸಮುದಾಯ, ಧರ್ಮದ ಜನತೆಯನ್ನು ಆಕರ್ಷಿಸಿಸುವ ಕ್ಷೇತ್ರ ಇದಾಗಿದ್ದು, `ಮೊಂತಿ ಹಬ್ಬ’ದ ದಿನದ ತನಕ ನಿರಂತರ ಒಂಭತ್ತು ದಿನಗಳ ವರೆಗೆ ಇಲ್ಲಿಕಳೆದ ಐದು ದಶಕಗಳಿಂದ ನಡೆದು ಬಂದಿದೆ. ದೇಶ-ವಿದೇಶಗಳಿಂದ ನೂರಾರು ಧರ್ಮದ ಅನುಯಾಯಿಗಳು ನೆರೆದು ಆರಾಧಿಸುತ್ತಿರುವ ಇರ್ಲಾದ ವೆಲಂಕಣಿ ದೇವಾಲಯಕ್ಕೆರಾಷ್ಟ್ರದಾದ್ಯಂತ ಭಕ್ತ ಜನತೆಯಿಂದ ಆಕರ್ಷಿಸಲ್ಪಡುವ ಚೆನ್ನೈಯಲ್ಲಿನ ವೆಲಂಕಣಿ ಮಾತೆಯಿಂದ ಪ್ರತಿಷ್ಠಾಪಿಸಲ್ಪಟ್ಟ ಚರ್ಚ್ ಇದಾಗಿದೆ. ಇಲ್ಲಿ ಆರೋಗ್ಯ ಮಾತೆಯ (ವೆಲಂಕಣಿ) ಮಂದಿರ ಸುಪ್ರಸಿದ್ಧ ಆರಾಧನಾ ಕೇಂದ್ರಗಳಲ್ಲಿ ಒಂದಾಗಿದ್ದು, ಇದೂ ಕೂಡಾ ಸರ್ವ ಧರ್ಮೀಯರು ಒಗ್ಗೂಡಿ ಪ್ರಾರ್ಥಿಸುವ ಪ್ರಾರ್ಥನಾಲಯವಾಗಿದೆ. ಇಲ್ಲಿ ಮಾತೆಯ ಹುಟ್ಟುಹಬ್ಬದ ಪೂರ್ವ ತಯಾರಿಯಾಗಿ ಒಂಭತ್ತು ದಿನಗಳಲ್ಲಿ ಪ್ರತೀದಿನ ಮುಂಜಾನೆ ಐದು ಗಂಟೆಯಿಂದ ರಾತ್ರಿ ಹತ್ತರ ವರೇಗೆ ನಿರಂತರ ನೊವೆನಾ ಆರಾಧನೆಗಳು ನಡೆಯುತ್ತಿದ್ದು, ಭಕ್ತರ ಭರವಸೆಯ ತಾಣವಾಗಿ ಪರಿಣಮಿಸಿದೆ. ಈ ಕ್ಷೇತ್ರಸರ್ವ ಧರ್ಮ ಸಮಭಾವದ ಪ್ರತೀಕಗಳೆಂದು ಕರೆಯಲ್ಪಡುತ್ತಿವೆ. ಇಲ್ಲಿ ಮಾತೆಯ ದರ್ಶನಕ್ಕೆ ಸರತಿ ಸಾಲಿನಲ್ಲಿ ಸಾಗುತ್ತಿರುವ ಭಕ್ತಾಧಿಗಳ ಸಂಖ್ಯೆ ಲಕ್ಷಕ್ಕೂ ಮಿಕ್ಕುತ್ತಿದ್ದುಇಂದಿಲ್ಲಿ ಇರ್ಲಾ ವೆಲಂಕಣಿ ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ಆಗಸ್ಟಿನ್ ಪಲ್ಲೊಟ್, ಸಹಾಯಕ ಗುರು ಫಾ| ವಿಜಯ್ ಪ್ರತಾಪ್ ಮುಂದಾಳುತ್ವದಲ್ಲಿ ಅಲಂಕೃತ ಮಾತೆಯ ಪುಸ್ಥಲಿಯೊಂದಿಗೆ ಭವ್ಯ ಮೆರವಣಿಗೆ ನಡೆಸಿ ಮಾತೆಗೆ ಆರಾಧಿಸಲಾಯಿತು.

By suddi9

Leave a Reply

Your email address will not be published. Required fields are marked *