ಬಂಟ್ವಾಳ: ದೇವಸ್ಯಪಡೂರು, ಕಾವಳಪಡೂರು ಗ್ರಾಮಗಳಿಗೆ ಸಂಬಂಧ ಪಟ್ಟಂತೆ ದೇವಸ್ಯಪಡೂರು ಗ್ರಾಮದ ದೋಟ ಎಂಬಲ್ಲಿ ಕಾವಳಪಡೂರು ಹಾಗೂ ದೇವಸ್ಯಪಡೂರು ಗ್ರಾಮಗಳ ಗಡಿಭಾಗದಲ್ಲಿ ಹಲವು ಸಮಯಗಳಿಂದ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಜಲ್ಲಿ ಕೋರೆ ನಡೆಸುತ್ತಿದ್ದು ಈಗಾಗಲೇ ಈ ಎರಡು ಗ್ರಾಮಕ್ಕೆ ಸಂಬಂಧ ಪಟ್ಟಂತೆ ಹಲವು ಮನೆಗಳಿಗೆ ಹಾನಿ ಉಂಟಾಗಿದೆ. ಜಲ್ಲಿ ಕೋರೆಗೆ ಸಂಬಂಧ ಪಟ್ಟವರಲ್ಲಿ ಈಗಾಗಲೇ ಮನೆಗಳಿಗೆ ಹಾನಿಯಾಗುವುದರ ಬಗ್ಗೆ ಹಲವು ಬಾರಿ ಹೇಳಿಕೊಂಡರೂ ಅವರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ .
IMG-20150902-WA0027

IMG-20150902-WA0029

22222
ಜಲ್ಲಿ ಕೋರೆಯಿಂದ ಮನೆಗಳಿಗೆ ಹಾನಿಯಾದುದಲ್ಲದೆ ಅವರು ಅಧಿಕ ಪ್ರಮಾಣದಲ್ಲಿ ಬಂಡೆಕಲ್ಲನ್ನು ಸ್ಪೋಟಿಸುವುದರಿಂದ ಪರಿಸರಕ್ಕೆ ಹಾನಿಯಾಗುವುದಲ್ಲದೆ, ಈಗಾಗಲೇ ಹಲವು ಬಾವಿಗಳ ನೀರು ಬತ್ತಿ ಹೋಗಿದ್ದು ಹಾಗೂ ಬಾವಿಯ ಒಳಭಾಗ ಮಣ್ಣು ಕುಸಿದು ಬೀಳುತ್ತದೆ.

ಈ ಪರಿಸರದಲ್ಲಿ ಹೆಚ್ಚು ಜನರು ಕೃಷಿ ಹಾಗೂ ತೋಟವನ್ನು ಅವಲಂಬಿಸಿ ಜೀವನ ನಡೆಸುವುದರಿಂದ, ಕೊಳವೆಬಾವಿಯ ನೀರಿಗೂ ಹಾನಿಯಾಗುವ ಸಂಭವ ಇರುವುದರಿಂದ ಕೃಷಿಕರಲ್ಲಿ ನೀರಿನ ಅಭಾವ ಉಂಟಾಗುವ ಬಗ್ಗೆ ಭೀತಿ ಗ್ರಾಮಸ್ಥರಲ್ಲಿ ಉಂಟಾಗಿದೆ.
ಈ ಬಗ್ಗೆ ಗ್ರಾಮಸ್ಥರು ಗ್ರಾಮಕರಣಿಕರಲ್ಲಿ ಮನವಿ ಮಾಡಿದ್ದು ಗ್ರಾಮಕರಣಿಕರು ಈ ಬಗ್ಗೆ ಯಾವುದೇ ಕ್ರಮ ಕೈಕೊಂಡಿರುವುದಿಲ್ಲ .

ಈ ಗಣಿಗಾರಿಕೆಯಿಂದ ಎರಡು ಗ್ರಾಮಗಳ ಜನರಿಗೆ ತೊಂದರೆ ಉಂಟಾಗಿದ್ದು ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕಾಗಿ ಹಾಗೂ ಈ ಗಣಿಗಾರಿಕೆಯನ್ನು ನಿಲ್ಲಿಸಬೇಕಾಗಿ ಈ ಮೂಲಕ (ಬಂಟ್ವಾಳ ತಹಶೀಲ್ದಾರರಿಗೆ) ಮನವಿ ಮಾಡಿರುತ್ತಾರೆ.
ಮಾಣಿಕ್ಯರಾಜ್, ಜಿತೇಶ್ ಜೈನ್, ದೀಪಕ್ ಕುಮಾರ್, ಉದಯ ಕುಮಾರ್, ಜಿನೇಂದ್ರ ಜೈನ್, ಗೀತಾ, ಚೆನ್ನಪ್ಪ , –ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *