ಕೈಕಂಬ: ಲೈಂಗಿಕ ಶೋಷನೆಯಿಂದ ಹೆಣ್ಣು ಮಕ್ಕಳನ್ನು ದೂರವಿಡಿ ಮತ್ತು ಸಮಾಜದಲ್ಲಿ ಧ್ಯರ್ಯವಂತರಾಗಿ ಎಂದು ಹೆಣ್ಣು ಮಕ್ಕಳಿಗೆ ಮಾನಸಿಕಸ್ಥರ್ಯವನ್ನು ತಂಬಿಸಬೇಕು ಎಂದು ವಕೀಲೆ ಆಶಾಪ್ರಸಾದ್ ರೈ ಹೇಳಿದರು.


ಅವರು ಸೆ.3ರಂದು ಶ್ರೀ ರಾಜರಾಜೇಶ್ವರೀ ಸರಕಾರಿ ಫ್ರೌಡ ಶಾಲೆ ಪೊಳಲಿ ” ಸೇಫ್ ಟಚ್” ಎನ್ನುವ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕಿ ಉಮಾ ವಹಿಸಿದ್ದರು. ಈ ಸಂದರ್ಭದಲ್ಲಿ ಬಂಟ್ವಾಳ ರೋಟರಿಯ ರಿತೇಶ್ ಬಾಳಿಗ , ರೋಟರಿಯನ್ ವಿದ್ಯಾ ಅಶ್ವಿನ್ ಕುಮಾರ್ ರೈ, ರೋಟರಿಯಾನ್ ದಿವ್ಯಾ ಕರುಣಾಕರ್ ರೈ ಉಪಸ್ಥಿತರಿದ್ದರು. ಶಿಕ್ಷಕಿ ರಂಜಿತಾ ಸ್ವಾಗತಿಸಿ ಉಮಾ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕವರ್ಗದವರು ಉಪಸ್ಥಿತರಿದ್ದರು.
